ದೇಶಿಯ ಶಸ್ತ್ರಾಸ್ತ್ರಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆ

ನವದೆಹಲಿ,ಅ.19- ಗುಜರಾತ್‍ನ ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್‍ಪೋವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ರಕ್ಷಣಾ ಪಡೆಗಳು ತನಗೆ ಬೇಕಾದ ಯುದ್ಧ ಸಲಕರಣೆಗಳನ್ನು ದೇಶೀಯವಾಗೇ ಖರೀದಿಸುವ ನಿರ್ಧಾರ ಮಾಡಿವೆ. ಇದು ಜಾಗತಿಕವಾಗಿ ಕೆಲವು ಕಂಪನಿಗಳ ಏಕಸ್ವಾಮತೆಯನ್ನು ಬೇಸಿದಂತಾಗಿದೆ ಎಂದಿದ್ದಾರೆ.
ಭಾರತೀಯ ರಕ್ಷಣಾ ಪಡೆಗಳ ನಿರ್ಧಾರ ಆತ್ಮ ನಿರ್ಭರ್ ಭಾರತ ಮತ್ತು ಮೇಕಿನ್ ಇಂಡಿಯಾದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ ರಫ್ತು ವಲಯದಲ್ಲಿ 2021-22ನೇ ಸಾಲಿನಲ್ಲಿ 13 ಸಾವಿರ ಕೋಟಿ ರೂ ಮೌಲ್ಯದ ವಹಿವಾಟು ನಡೆಸಿದೆ.
ಸುಮಾರು 40 ಸಾವಿರ ಕೋಟಿ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಮೊದಲು ಪಾರಿವಾಳಗಳನ್ನು ಬಿಡಲಾಗುತ್ತಿತ್ತು. ಈಗ ನಾವು ಚೀತಾಗಳನ್ನು ಬಿಡುಗಡೆ ಮಾಡಿದ್ದೇವೆ. ಗುಜರಾತಿನ ಉತ್ತರ ವಲಯದಲ್ಲಿ ವಾಯುನೆಲೆ ಸ್ಥಾಪನೆಗಾಗಿ ಇದೇ ಸಂದರ್ಭದಲ್ಲಿ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.
ಇದರಿಂದ ಭಾರತ-ಪಾಕ್ ಗಡಿಯಲ್ಲಿ ಭದ್ರತೆ ಇನ್ನಷ್ಟು ಸುಭದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ರಕ್ಷಣಾ ಸಚಿವಾಲಯ 101ಕ್ಕೂ ಹೆಚ್ಚು ಸಲಕರಣಿಗಳನ್ನು ದೇಶೀಯವಾಗಿಯೇ ಖರೀದಿಸಲು ನಿರ್ಧರಿಸಿದೆ. 411 ಸಲಕರಣಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ. ಇದು ಭಾರೀ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.