ದಾವಣಗೆರೆಯಲ್ಲಿ ಕೊಟ್ಟ ಗಿಫ್ಟ್‌ ರಸ್ತೆಗೆ ಎಸೆದ ಮಹಿಳೆಯರು; ಶಾಮನೂರು ಶಿವಶಂಕರಪ್ಪ ವಿರುದ್ಧ ಆಕ್ರೋಶ

ದಾವಣಗೆರೆಯಲ್ಲಿ ಕೊಟ್ಟ ಗಿಫ್ಟ್‌ ರಸ್ತೆಗೆ ಎಸೆದ ಮಹಿಳೆಯರು; ಶಾಮನೂರು ಶಿವಶಂಕರಪ್ಪ ವಿರುದ್ಧ ಆಕ್ರೋಶ

ದಾವಣಗೆರೆ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಮೂರು ಪಕ್ಷಗಳ ಚುನಾವಣೆ ಪ್ರಚಾರದ ಬೇಟೆ ಜೋರಾಗಿದೆ. ಹೀಗಾಗಿ ಮತದಾರರ ಸೆಳೆಯಲು ಕೆಲ ಜಿಲ್ಲೆಗಳಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ಶುರುಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದು, ಚೆಕ್‌ ಪೋಸ್ಟ್‌ ಗಳನ್ನು ತೆರೆದಿದ್ದಾರೆ. ಅದರಲ್ಲೂ ಮತದಾರರಿಗೆ ಸೀರೆ, ಕುಕ್ಕರ್‌ , ಹಣ ನೀಡಲು ವಾಹನದಲ್ಲಿ ಸಾಗಿಸುತ್ತಿದ್ದಾರೆ. ಇದೀಗ ದಾವಣಗೆರೆಯಲ್ಲಿ ಶಾಸಕ ಶಾಮನೂರು ಕೊಟ್ಟ ಗಿಫ್ಟ್ ಅನ್ನು ಮಹಿಳೆಯರು ರಸ್ತೆ ಎಸೆದು ಮೂಲಭೂತ ಸೌಕರ್ಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ದಕ್ಷಿಣ ಕ್ಷೇತ್ರದ ಶಾಸಕ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು, ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಕಳೆದ 1 ತಿಂಗಳಿನಿಂದ ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ಭಾವಚಿತ್ರವಿರುವ ಬ್ಯಾಗ್‌ಗಳಲ್ಲಿ ಸೀರೆ, ಕುಕ್ಕರ್, ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಮತದಾರರಿಗೆ ನೀಡುತ್ತಿದ್ದಾರೆ. ಆ ಗಿಫ್ಟ್‌ ನಲ್ಲಿ ಯುಗಾದಿ ಹಬ್ಬದ ಶುಭಾಶಯ ಎಂದು ಹೇಳಿ ಮತದಾರರಿಗೆ ಉಡುಗೊರೆ ಹಂಚುತ್ತಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜನರು ಸರಿಯಾದ ಮೂಲಭೂತ ಸೌಕರ್ಯ ಸಿಗದೆ ಜನರು ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಿದ್ದಾರೆ. ಚುನಾವಣೆ ಬಂದಿದೆ ಎಂದು ಗಿಫ್ಟ್‌ಗಳನ್ನು ನೀಡಿ ಮನವೊಲಿಸುವ ಕೆಲಸ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ‌ೆಳಗಾವಿ : ಮುಂದಿನ ವಿಧಾನ ಸಭೆ ಚುನಾವಣೆಗೆ ಮತದಾರರ ಸೆಳೆಯೋದಕ್ಕಾಗಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸಂಗ್ರಹಿಸಿದ್ದ ಸಾಮಾಗ್ರಿ ಸೀಜ್ ಎಂದು ತಿಳಿಯಲಾಗಿದೆ.

ಬ‌ೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಗಣವಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಬಸವರಾಜ ಪಟ್ಟಣಶೆಟ್ಟಿ ಫೋಟೋ ವಿರುವ ಸಾಮಾಗ್ರಿಯನ್ನು ಮತದಾರರಿಗೆ ಕೊಡಲು ಸಂಗ್ರಹಿಸಿಟ್ಟಿದ್ದರು. ಈ ವಿಚಾರ ಚುನಾವಣಾಧಿಕಾರಿಗಳಿಗೆ ತಿಳಿದಿದ್ದು, 49 ಹೊಲಿಗೆ ಯಂತ್ರ, 29 ಕುಕ್ಕರ್‌ ಸೇರಿ ಹಲವು ವಸ್ತುಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಲ್ಲ ವಸ್ತುಗಳ ಮೇಲೆಬಿಜೆಪಿ ಮುಖಂಡ ಬಸವರಾಜ ಪಟ್ಟಣಶೆಟ್ಟಿ ಫೋಟೋ ಇರುವು ಕಂಡು ಬಂದಿದೆ. ಇದು ಮತದಾರರಿಗೆ ಕೊಡಲು ತಂದಿರುವ ವಸ್ತು ಎಂದು ತಿಳಿಯಲಾಗಿದೆ.