ಚಂದ್ರನ ಮೇಲೆ ಮಾನವ ಕಾಲಿಟ್ಟರೂ ಇದುವರೆಗೂ ರೈಲು ಸಂಪರ್ಕ ಕಂಡಿಲ್ಲ ಈ ದೇಶಗಳು.
ಭಾರತೀಯ ರೈಲ್ವೇ ದೇಶದ ಬಹುತೇಕ ಎಲ್ಲಾ ನಗರಗಳನ್ನು ತಲುಪಿದೆ. ದೂರದ ಪ್ರಯಾಣಕ್ಕಾಗಿ ಜನರು ವಿಮಾನಗಳನ್ನು ಬಿಟ್ರೆ ಹೆಚ್ಚಾಗಿ ನೆಚ್ಚಿಕೊಳ್ಳೋದು ರೈಲುಗಳನ್ನ. ಬಡ ಮತ್ತು ಮಧ್ಯಮ ವರ್ಗದವರಿಗಂತೂ ರೈಲು ವರದಾನವಾಗಿದೆ. ಆದ್ರೆ ಪ್ರಪಂಚ ಇಷ್ಟು ವೇಗವಾಗಿ ಬೆಳೆಯುತ್ತಿದ್ರೂ ಎಷ್ಟೋ ದೇಶಗಳಲ್ಲಿ ಇದುವರೆಗೂ ಒಮ್ಮೆಯೂ ರೈಲು ಓಡಿಲ್ಲ.
ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ದೇಶವಾದ ಭೂತಾನ್‌ನಲ್ಲಿ ಇಲ್ಲಿಯವರೆಗೆ ರೈಲ್ವೆ ಜಾಲವನ್ನು ಅಭಿವೃದ್ಧಿಪಡಿಸಿಲ್ಲ. ಭೂತಾನ್ ಭೌಗೋಳಿಕವಾಗಿ ಬಹಳ ಸುಂದರವಾದ ದೇಶ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ತಾಣವಿದು. ಆದರೆ ಈವರೆಗೂ ಭೂತಾನ್‌ಗೆ ರೈಲು ಸಂಪರ್ಕವಿಲ್ಲ. ಭಾರತ ಭೂತಾನ್ ರೈಲು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸ್ತಾ ಇದೆ.
ಕುವೈತ್ ತೈಲ ನಿಕ್ಷೇಪಗಳನ್ನು ಹೊಂದಿದೆ. ಆದರೆ ಇಲ್ಲಿಯವರೆಗೆ ಕುವೈತ್‌ನಲ್ಲಿ ರೈಲು ಮಾರ್ಗವಿಲ್ಲ. ಈ ದೇಶದಲ್ಲಿ ವಾಸಿಸುವ ಜನರು ತುಂಬಾ ಶ್ರೀಮಂತರು ಮತ್ತು ಅವರ ಜೀವನಶೈಲಿ ಕೂಡ ಹೈ-ಫೈ ಆಗಿದೆ. ಅಷ್ಟಾದ್ರೂ ಇದುವರೆಗೂ ರೈಲು ಸಂಪರ್ಕವನ್ನು ಕಲ್ಪಿಸಲಾಗಿಲ್ಲ. ಸದ್ಯ ಕುವೈತ್‌ನಲ್ಲಿ ರೈಲ್ವೇ ಯೋಜನೆಯ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕುವೈತ್ ರೈಲುಗಳಲ್ಲಿ ಭಾರತೀಯರು ಪ್ರಯಾಣಿಸುವ ದಿನ ದೂರವಿಲ್ಲ.
ಅಂಡೋರಾವನ್ನು ವಿಶ್ವದ ಸಣ್ಣ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ಈ ದೇಶವು ವಿಸ್ತೀರ್ಣದಲ್ಲಿ ಬಹಳ ಚಿಕ್ಕದು.ಈ ದೇಶದಲ್ಲಿ ಇಲ್ಲಿಯವರೆಗೆ ರೈಲ್ವೆ ಜಾಲವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಇಲ್ಲಿನ ಜನರು ಖಾಸಗಿ ವಾಹನಗಳು ಅಥವಾ ಬಸ್ಸುಗಳನ್ನು ಹೆಚ್ಚು ಬಳಸುತ್ತಾರೆ.
ಪೂರ್ವ ಟಿಮೋರ್‌ನಲ್ಲಿ ಕೂಡ ರೈಲು ಸಂಪರ್ಕವಿಲ್ಲ. ವಿಸ್ತೀರ್ಣದ ದೃಷ್ಟಿಯಿಂದ ನೋಡಿದ್ರೆ ವಿಶ್ವದ ಅತ್ಯಂತ ಚಿಕ್ಕ ದೇಶವಿದು. ಇಲ್ಲಿನ ಜನರು ರಸ್ತೆಗಳ ಮೂಲಕ ಹೆಚ್ಚು ಪ್ರಯಾಣಿಸುತ್ತಾರೆ. ಸದ್ಯದಲ್ಲೇ ಈ ದೇಶದಲ್ಲಿ 310 ಕಿ.ಮೀ ಉದ್ದದ ರೈಲು ಹಳಿ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ.
ಸೈಪ್ರಸ್ ಕೂಡ ರೈಲು ಜಾಲವನ್ನು ಹೊಂದಿಲ್ಲ. 1950 ರಿಂದ 1951 ರವರೆಗೆ ಇಲ್ಲಿ ರೈಲ್ವೆ ಸಂಪರ್ಕವಿತ್ತು. ಆದರೆ ಕೆಟ್ಟ ಆರ್ಥಿಕ ಸ್ಥಿತಿಯಿಂದಾಗಿ ಈ ಟ್ರ್ಯಾಕ್ ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ 1951ರ ನಂತರ ಇಲ್ಲಿ ರೈಲು ಮಾರ್ಗವನ್ನು ಮುಚ್ಚಲಾಯಿತು.