ಕೊರೋನ ವಾರಿಯರ್ಸ್ಗಳನ್ನು ನೆನೆದು ಗೌರವಿಸುವುದು ನಮ್ಮ ಧರ್ಮ
ಮಹದೇವಪುರ, ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸುವ ನಿಸ್ವಾರ್ಥ ಸೇವೆ ಸಲ್ಲಿಸಿದ ಕೊರೋನ ವಾರಿಯರ್ಸ್ಗಳನ್ನು ನೆನೆದು ಗೌರವಿಸುವುದು ನಮ್ಮ ಧರ್ಮ ಎಂದು ಬಿದರಹಳ್ಳಿ ಪಂಚಾಯತಿ ಅಧ್ಯಕ್ಷ ಬಿ.ವಿ. ವರುಣ್ ತಿಳಿಸಿದರು. ಕ್ಷೇತ್ರದ ಬಿದರಹಳ್ಳಿ ಪಂಚಾಯತಿ ಯ ಮಾರ್ಗೊಂಡನಹಳ್ಳಿಯಲ್ಲಿ ಆಯೋಜಿಸಿದ ಕೊರೋನವಾರಿಯರ್ಸ್ಗಳಿಗೆ ಗೌರವಿಸಿ ಅಭಿನಂದಿಸುವ ಕಾರ್ಯಕ್ರಮವನು ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನು ಲೆಕ್ಕಿಸದೇ ಜನರ ಜೀವ ಉಳಿಸುವ ಕಾರ್ಯಕ್ಕೆ ನಿತ್ಯ ಹೋರಾಟ ನಡೆಸಿದ ವೈದ್ಯರು, ಆಶಾ ಕಾರ್ಯಕರ್ತೆರು, ಕೊರೋನ ವಾರಿಯರ್ಸ್ಗಳಿಗೆ ಅಭಿನಂದಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಇದು ನಮ್ಮ ಆಧ್ಯ ಕರ್ತವ್ಯ ಎಂದರು. ಬ್ಲಾಕ್ ಅಧ್ಯಕ್ಷ ಎಂಸಿಬಿ ರಾಜಣ್ಣ, ಸುನೀಲ್, ಸುರೇಶ್ ರೆಡ್ಡಿ, ಸುರೇಶ್, ನಾಗಣ್ಣ, ಜಗನಾಥ್, ಕುಮಾರ್, ಲೋಕೇಶ್, ಸ್ಥಳೀಯ ಮುಖಂಡು ಮತ್ತಿತರರು ಈ ಸಂದರ್ಭದಲ್ಲಿ ಇದ್ದರು