ಕುಕ್ಕರ್‌ ಬಾಂಬ್‌ ಸ್ಪೋಟ ಕೇಸ್‌; ಶಾರಿಕ್‌ ವಿಚಾರಣೆಗೆ ಎನ್‌‌ಐಎ ಸಿದ್ದತೆ

ಕುಕ್ಕರ್‌ ಬಾಂಬ್‌ ಸ್ಪೋಟ ಕೇಸ್‌; ಶಾರಿಕ್‌ ವಿಚಾರಣೆಗೆ ಎನ್‌‌ಐಎ ಸಿದ್ದತೆ

ಮಂಗಳೂರು: ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌‌ ಕೇಸ್‌ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೊಡ್ಡಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರಿಕ್‌ ಪ್ಲಾನ್‌ ಮಾಡಿದ್ದು, ಉಗ್ರನ ಚೈನ್‌‌ ಲಿಂಕ್‌‌ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನ ಬಂದಿದೆ. ಈತನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದೆ ಎಂದು ಎನ್‌ಐಎ ಶಂಕೆ ವ್ಯಕ್ತಪಡಿಸಿದೆ. ಫಾದರ್‌‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಕ್‌‌ ಅನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ಎನ್‌ಐಎ ಮುಂದಾಗಿದೆ.