ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಡಾ.ಬ್ರೋ ವಿಜಯವಾಣಿ ಕಚೇರಿಯಲ್ಲಿ ನಡೆಸಿದ ವಿಶೇಷ ಸಂವಾದದಲ್ಲಿ ತಮ್ಮ ವಿಶ್ವಪರ್ಯಟನೆ ಕುರಿತು ಹಲವಾರು ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ಆ ಪೈಕಿ ಅವರ ವಿದೇಶ ಪ್ರವಾಸದ ತಯಾರಿ ಕೂಡ ಪ್ರಮುಖವಾದುದು. ಯಾವುದೇ ದೇಶಕ್ಕೆ ಪ್ರವಾಸ ಹೊರಡುವಾಗ ತಾವು ಗಮನಿಸುವ ಅಂಶಗಳು ಯಾವುವು, ತೆಗೆದುಕೊಳ್ಳುವ ಎಚ್ಚರಿಕೆಗಳು ಏನು ಮತ್ತು ತಮ್ಮೊಂದಿಗೆ ಕೊಂಡೊಯ್ಯುವ ವಸ್ತುಗಳು ಯಾವುವು ಎಂಬೆಲ್ಲ ಮಾಹಿತಿಗಳನ್ನು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೋಗಲ್ಲ: ನಾನು ಯಾವುದೇ ದೇಶಕ್ಕೆ ಹೋಗುವಾಗ ಕೆಲವೊಂದು ಮುನ್ನೆಚ್ಚರಿಕೆ ವಹಿಸುತ್ತೇನೆ. ಮಳೆ ಅಥವಾ ಬೇಸಿಗೆ ಕಾಲದಲ್ಲಿ ಹೋಗಲ್ಲ. ಯಾವುದೇ ದೇಶದಲ್ಲಿ ದಂಗೆ, ಪ್ರತಿಭಟನೆ ಇದ್ದಾಗ ಹೋಗುವುದಿಲ್ಲ. ಅದರಲ್ಲೂ ಯಾವುದಾದರೂ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದರೆ ಅಂಥ ಸಂದರ್ಭಗಳಲ್ಲಿ ಅಲ್ಲಿಗೆ ಕ್ಯಾಮರಾ ಹಿಡಿದುಕೊಂಡು ಹೋಗುವುದು ಅಪಾಯಕಾರಿ ಎನ್ನುತ್ತಾರೆ ಗಗನ್.