ಉತ್ತರಾಖಂಡದ ಜೋಷಿಮಠದಲ್ಲಿ ದೇವಾಲಯ ಕುಸಿತ

ಉತ್ತರಾಖಂಡದ ಜೋಷಿಮಠದಲ್ಲಿ ದೇವಾಲಯ ಕುಸಿತ

ಉತ್ತರಾಖಂಡ ದ ಜೋಷಿಮಠದಲ್ಲಿ ದೇವಾಲಯ ಕುಸಿತವಾಗಿದೆ. ಸಿಂಗ್ ಧರ್ ವಾರ್ಡ್ ನಲ್ಲಿ ದೇವಾಲಯ ಕುಸಿತ ಕಂದು ಬಂದಿದೆ. ಸ್ಥಳೀಯರ ಪ್ರಕಾರ, ದೇವಾಲಯದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ದೇವಾಲಯದಲ್ಲಿ 15 ದಿನಗಳಿಂದ ಬೃಹತ್ ಪ್ರಮಾಣದ ಬಿರುಕು ಪತ್ತೆಯಾಗಿತ್ತು. ದೇವಾಲಯ ಕುಸಿತ ಕಂಡಿರುವ ಪರಿಣಾಮ ದೇವಾಲಯದ ಬಳಿಯೇ ಇದ್ದ ಹಲವು ಮನೆಗಳಲ್ಲಿ ಬಿರುಕು ಪತ್ತೆಯಾಗಿದ್ದು, 50ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.