ಇಸ್ಲಾಂಗೆ ಮತಾಂತರ ಆದ್ರಾ ಕರ್ನಾಟಕದ ಸೊಸೆ?; ಹಿಜಾಬ್ ಧರಿಸಿದ ರಾಖಿ ಈಗ ಫಾತಿಮಾ.
ಬೆಂಗಳೂರು: ಬಾಲಿವುಡ್ ನಟಿ ರಾಖಿ ಸಾವಂತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಕಾರಣದಿಂದ ರಾಖಿ ಸಖತ್ ಟ್ರೆಂಡಿಂಗ್‍ನಲ್ಲಿದ್ದಾರೆ. ತನ್ನ ಬಾಯ್‌ಫ್ರೆಂಡ್ ಮೈಸೂರು ಮೂಲದ ಆದಿಲ್‌ನನ್ನು ಮದುವೆಯಾಗಿರುವುದಾಗಿ ಆಕೆ ಬಹಿರಂಗಪಡಿಸಿದ್ದಾಳೆ.ಎಂದು ಬದಲಾಯಿಸಿಕೊಂಡಿರುವುದಾಗಿಯೂ ತಿಳಿಸಿದ್ದಾನೆ. ರಾಖಿ ಅಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ನಟಿ ಹಿಜಾಬ್ ಧರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ನೆಟಿಜನ್‍ಗಳು ರಾಖಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ರಾಖಿ ತಾನು ಆದಿಲ್‍ನನ್ನು ಮದುವೆಯಾಗಿದ್ದೇನೆ. ತನ್ನ ಹೆಸರನ್ನು
ಹಿಜಾಬ್‌ನಲ್ಲಿ ಕಾಣಿಸಿಕೊಂಡ ರಾಖಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಖಿ ಸಾವಂತ್ ಹಿಜಾಬ್ ಧರಿಸಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಆಕೆ ಕೇಸರಿ ಬಣ್ಣದ ಹಿಜಾಬ್ ಧರಿಸಿದ್ದಾಳೆ. ಇದರೊಂದಿಗೆ ಆದಿಲ್ ಜೊತೆ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋಗಳನ್ನು ಆಕೆ ಹಂಚಿಕೊಂಡಿದ್ದಾಳೆ. ಆದಿಲ್ ಜೊತೆಗಿನ ತನ್ನ ಮದುವೆ ವಿಷಯವನ್ನು ರಾಖಿ ಈ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು.
ರಾಖಿ ಮದುವೆಗೆ ಸಾಕ್ಷಿ