ಹಾಡಹಗಲೇ ಘೋರ ಕೃತ್ಯ; ಮಚ್ಚಿನಿಂದ ದಾಳಿ ನಡೆಸಿ ವ್ಯಕ್ತಿ ಹತ್ಯೆ

ಕೊಯಮತ್ತೂರಿನ ನ್ಯಾಯಾಲಯ ಸಂಕೀರ್ಣದ ಹಿಂದೆ ಮಾರಕಾಸ್ತ್ರಗಳಿಂದ ಐವರ ತಂಡ ಇಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ಅಚ್ಚರಿಯೆಂದರೆ ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುಂಪೊಂದು ಇಬ್ಬರನ್ನು ಸುತ್ತುವರಿದು ದಾಳಿ ನಡೆಸಿತು.
ಘಟನೆಯ ನಂತರ ಗಾಯಗೊಂಡ ವ್ಯಕ್ತಿ ಮನೋಜ್ (27) ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವ್ಯಕ್ತಿಗಳು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬಂದಿದ್ದರು. ಚಹಾ ಕುಡಿಯಲು ಹೊರಗೆ ಹೋಗಿದ್ದಾಗ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.