ಯೂಟ್ಯೂಬ್‌ನ ನೂತನ ಸಿಇಒ ಆಗಿ ಭಾರತ ಮೂಲದ ನೀಲ್ ಮೋಹನ್ ನೇಮಕ, ಯಾರಿವರು?

ಯೂಟ್ಯೂಬ್‌ನ ನೂತನ ಸಿಇಒ ಆಗಿ ಭಾರತ ಮೂಲದ ನೀಲ್ ಮೋಹನ್ ನೇಮಕ, ಯಾರಿವರು?

ವಿಶ್ವದ ಅತೀ ದೊಡ್ಡ ಆನ್‌ಲೈನ್ ವೀಡಿಯೋ ಪ್ಲಾಟ್‌ಫಾರ್ಮ್ ಆದ ಯೂಟ್ಯೂಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದ ಸುಸಾನ್ ವೊಜ್ಸಿಕಿ ಸುಮಾರು 9 ವರ್ಷಗಳ ಬಳಿಕ ತಮ್ಮ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ. ಈಗ ಭಾರತ ಮೂಲದ ನೀಲ್ ಮೋಹನ್ ಯೂಟ್ಯೂಬ್‌ನ ನೂತನ ಸಿಒಒ ಆಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ 54 ವರ್ಷದ ಸುಸಾನ್ ವೊಜ್ಸಿಕಿ, "ನಾನು ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಲು ನಿರ್ಧಾರ ಮಾಡಿದ್ದೇನೆ," ಎಂದು ತಿಳಿಸಿದ್ದಾರೆ. ಸುಸಾನ್ ವೊಜ್ಸಿಕಿ ಈ ಹಿಂದೆ ಗೂಗಲ್‌ನಲ್ಲಿ ಉತ್ಪನ್ನಗಳ ವಲಯದಲ್ಲಿ ಹಿರಿಯ ಉಪಾಧ್ಯಕ್ಷರು ಆಗಿದ್ದರು.

2014ರಲ್ಲಿ ಅಂದರೆ 9 ವರ್ಷಗಳ ಹಿಂದೆ ಸುಸಾನ್ ವೊಜ್ಸಿಕಿ ಯೂಟ್ಯೂಬ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಗೂಗಲ್‌ನ ಅತೀ ಹಳೆಯ ಅಥವಾ ಗೂಗಲ್‌ನ ಮೊದಲ ಉದ್ಯೋಗಿಗಳ ಪೈಕಿ ಸುಸಾನ್ ವೊಜ್ಸಿಕಿ ಕೂಡಾ ಒಬ್ಬರಾಗಿದ್ದಾರೆ. ಕಳೆದ 25 ವರ್ಷಗಳಿಂದ ಇದರ ಪೋಷಕ ಸಂಸ್ಥೆಯಾದ ಆಲ್ಫಾಬೈಟ್ ಇಂಕ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಗೂಗಲ್‌ಗೂ ಮುನ್ನ ವೊಜ್ಸಿಕಿ ಇಂಟಲ್‌ ಕಾರ್ಪ್‌ ಮತ್ತು ಬೇನ್ & ಕಂಪನಿಯಲ್ಲಿಯೂ ಉದ್ಯೋಗಿಯಾಗಿದ್ದರು. ಇನ್ನು ಯೂಟ್ಯೂಬ್‌ನ ನೂತನ ಸಿಇಒ ಬಗ್ಗೆ ತಿಳಿಯಲು ಮುಂದೆ ಓದಿ....

ಯೂಟ್ಯೂಬ್‌ನ ನೂತನ ಸಿಇಒ ನೀಲ್‌ ಮೋಹನ್ ಯಾರು?

* 49 ವರ್ಷ ಪ್ರಾಯದ ಭಾರತೀಯ-ಅಮೇರಿಕನ್ ನೀಲ್ ಮೋಹನ್ ಸ್ಟಾನ್‌ಫಾರ್ಡ್‌ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರೀಕ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

* ನೀಲ್ ಮೋಹನ್ 2015ರಲ್ಲಿ ಯೂಟ್ಯೂಬ್‌ನ ಮುಖ್ಯ ಉತ್ಪಾದನ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಆರಂಭಿಸಿದ್ದಾರೆ.

* ಅಕ್ನೆಚರ್‌ನಲ್ಲಿ (Accenture) 1996ರಲ್ಲಿ ತನ್ನ ವೃತ್ತಿ ಜೀವನವನ್ನು ನೀಲ್ ಮೋಹನ್ ಆರಂಭಿಸಿದ್ದಾರೆ. ಅದಾದ ಬಳಿಕ ಸ್ಟಾರ್ಟ್‌ಅಪ್ ಸಂಸ್ಥೆಯಾದ ನೆಟ್‌ಗ್ರಾವಿಟಿಗೆ ಸೇರ್ಪಡೆಯಾಗಿದ್ದಾರೆ. ಈ ಸಂಸ್ಥೆಯನ್ನು ಡಬಲ್‌ಕ್ಲಿಕ್ ಸಂಸ್ಥೆ ಬಳಿಕ ಖರೀದಿ ಮಾಡಿದೆ.

* 2007ರಲ್ಲಿ ಡಬಲ್‌ಕ್ಲಿಕ್ ಸಂಸ್ಥೆಯನ್ನು ಗೂಗಲ್ ಖರೀದಿ ಮಾಡಿದೆ. ಅದಾದ ಬಳಿಕ 2008ರಲ್ಲಿ ಗೂಗಲ್‌ಗೆ ಸೇರ್ಪಡೆಯಾಗಿದ್ದಾರೆ. ಗೂಗಲ್‌ನ ಜಾಹೀರಾತು ಉತ್ಪನ್ನಗಳಾದ ಆಡ್‌ವರ್ಡ್ಸ್, ಆಡ್‌ಸೆನ್ಸ್, ಡಬಲ್‌ಕ್ಲಿಕ್ ಅನ್ನು ಮಾರಾಟ ಮಾಡುವಲ್ಲಿ ನೀಲ್ ಮೋಹನ್ ಪ್ರಮುಖ ಪಾತ್ರ ವಹಿಸಿದ್ದಾರೆ.

* ನೀಲ್‌ ಮೋಹನ್‌ ಮೈಕ್ರೋಸಾಫ್ಟ್‌ನಲ್ಲೂ ಕಾರ್ಯನಿರ್ವಹಣೆ ಮಾಡಿದ್ದಾರೆ. ಮೈಕ್ರೋಸಾಫ್ಟ್‌ನಲ್ಲಿ ಮ್ಯಾನೆಜರ್‌ ಆಗಿದ್ದರು. ಅಮೇರಿಕಾದ ಸೈಲಿಂಗ್ ಸೇವೆಯನ್ನು ನೀಡುವ ಸ್ಟಿಚ್ ಫಿಕ್ಸ್ ಮತ್ತು ಬಯೋಟೆಕ್ ಸಂಸ್ಥೆಯಾದ 23andMeನಲ್ಲಿ ನೀಲ್ ಮೋಹನ್ ಬೋರ್ಡಿಂಗ್‌ ಸದಸ್ಯರಾಗಿದ್ದಾರೆ.

* ಯೂಟ್ಯೂಬ್‌ನ ಅತೀ ಜನಪ್ರಿಯ ಉತ್ಪನ್ನಗಳಾದ ಯೂಟ್ಯೂಬ್ ಪ್ರೀಮಿಯಂ, ಯೂಟ್ಯೂಬ್ ಮ್ಯೂಸಿಕ್, ಮಕ್ಕಳಿಗಾಗಿ ಯೂಟ್ಯೂಬ್ ಕಿಡ್ಸ್, ಯೂಟ್ಯೂಬ್ ಟಿವಿ, ಯೂಟ್ಯೂಬ್ ಶಾರ್ಟ್ ಅನ್ನು ಆರಂಭಿಸುವಲ್ಲಿ ನೀಲ್ ಮೋಹನ್ ಪ್ರಮುಖ ಪಾತ್ರವಹಿಸಿದ್ದಾರೆ.