ಯಾದಗಿರಿ: ಬಿಜೆಪಿ ಸೇರಿದ ಹಮಾಲರಸಂಘದ ಪದಾಧಿಕಾರಿಗಳು

ಯಾದಗಿರಿ: ಬಿಜೆಪಿ ಸೇರಿದ ಹಮಾಲರಸಂಘದ ಪದಾಧಿಕಾರಿಗಳು

ಕೆಂಭಾವಿ: ಹಮಾಲರ ಸಂಘದ ಅಧ್ಯಕ್ಷ ಬಸವರಾಜ ಕವಲ್ದಾರ್‌ ನೇತೃತ್ವದಲ್ಲಿ ಹಮಾಲರ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಬಿಜೆಪಿಗೆ ಬೆಂಬಲ ಘೋಷಿಸಿ ಮುಖಂಡ ಪ್ರಕಾಶ (ಗುಂಡುಗೌಡ) ಯಾಳಗಿ, ಸಂಗಣ್ಣ ತುಂಬಗಿ ಹಾಗೂ ಶ್ರೀನಿವಾಸರೆಡ್ಡಿ ಯಾಳಗಿ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಪ್ರಕಾಶ (ಗುಂಡುಗೌಡ) ಯಾಳಗಿ, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಶಹಾಪುರ ಕ್ಷೇತ್ರದಲ್ಲೂ ಬಿಜೆಪಿ ರಣಕಹಳೆ ಮೊಳಗಿಸುವದು ಶತಃಸಿದ್ದ. ಯಾವುದೇ ಪುರಾವೆಗಳಿಲ್ಲದೆ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಸ್ಥಳೀಯ ಶಾಸಕರೆ ಭ್ರಷ್ಟಾಚಾರದಲ್ಲಿ ಮುಳಗಿದ್ದಾರೆ. ಇಂತಹವರು ಯಾವ ನೈತಿಕತೆ ಆಧಾರದ ಮೇಲೆ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. ತಾವು ಶುದ್ಧವಿದ್ದು ಬೇರೆಯವರ ಬಗ್ಗೆ ಮಾತನಾಡುವುದನ್ನು ಕಲಿಯಬೇಕು ಎಂದು ವಾಗ್ದಾಳಿ ನಡೆಸಿದರು.

ಪ್ರಮುಖರಾದ ಶರಣಪ್ಪ ಯಾಳಗಿ, ಮಲ್ಲಿನಾಥಗೌಡ, ರಮೇಶ ಕೊಡಗಾನೂರ, ಶಿವಪ್ಪ ಕಂಬಾರ, ಉಮೇಶರೆಡ್ಡಿ, ಹಳ್ಳೆಪ್ಪ, ನಿಂಗಪ್ಪ ಹಲಗಿ, ರಾಮಣ್ಣ, ಕಾಶಿನಾಥ, ಬಾವಾಸಾಬ, ಮಲ್ಲು ವಠಾರ
ಇದ್ದರು.

ಸೇರ್ಪಡೆಯಾದ ಪ್ರಮುಖರು: ಹಮಾಲರ ಸಂಘದ ಅಧ್ಯಕ್ಷ ಬಸವರಾಜ ಕವಲ್ದಾರ್‌, ಹಣಮಂತ್ರಾಯ, ಯಮನಪ್ಪ, ಶಿವಪುತ್ರಪ್ಪ, ಮಾನಪ್ಪ, ಮಡಿವಾಳಪ್ಪ, ಹಳ್ಳೆಪ್ಪ, ಚನ್ನಪ್ಪ, ಭೀಮಣ್ಣ, ಮಾನಪ್ಪ, ರಾಮು ಸೇರಿದಂತೆ ಸುಮಾರು 200ಕ್ಕೂಹೆಚ್ಚು ಜನ ಪಕ್ಷ ಸೇರ್ಪಡೆಯಾದರು.