ಬೆಳಗಾವಿ| ಕೆಂದಳಿಲು ಬೇಟೆ: ಆರೋಪಿ ಬಂಧನ
ಖಾನಾಪುರ: ಲೋಂಡಾ ಅರಣ್ಯ ವ್ಯಾಪ್ತಿಯ ತಿವೋಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅಳಿವಿನಂಚಿನಲ್ಲಿರುವ ಮತ್ತು ಕಾಡು ಬೆಕ್ಕು ಜಾತಿಯ ಪ್ರಭೇದದ ಅಪರೂಪದ ವನ್ಯಜೀವಿ ಕೆಂದಳಿಲನ್ನು ಬೇಟೆಯಾಡಿದ ಬೇಟೆಗಾರನನ್ನು ತಾಲ್ಲೂಕಿನ ಲೋಂಡಾ ವಲಯದ ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ತಿವೋಲಿ ಗ್ರಾಮದ ನಿವಾಸಿ ಲಾದ್ರು ಲೂಯಿಸ್ ಧಮೆಲ್ ಬಂಧಿತ ಬೇಟೆಗಾರ. ಈತನ ಜೊತೆಗೆ ಬೇಟೆಗೆ ಬಂದಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತನಿಂದ ಒಂದು ನಾಡ ಬಂದೂಕು, ಹಲವು ಜೀವಂತ ಗುಂಡುಗಳು, ಸಿಡಿಮದ್ದು ಪೌಡರ್ ಮತ್ತು ಕೆಂದಳಿಲ ಕಳೇಬರವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಲೋಂಡಾ ವಲಯ ಅರಣ್ಯ ಅಧಿಕಾರಿಗಳ
ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.