ಬಿಪಿಎಲ್ ಪಡಿತರದಲ್ಲಿ ಕುಚಲಕ್ಕಿ ಭಾಗ್ಯ : ಸಿಎಂ ನಿರ್ಧಾರ

ಬಿಪಿಎಲ್ ಪಡಿತರದಲ್ಲಿ ಕುಚಲಕ್ಕಿ ಭಾಗ್ಯ : ಸಿಎಂ ನಿರ್ಧಾರ

ಬೆಂಗಳೂರು: ಕುಚಲಕ್ಕಿ ಖರೀದಿಸಲು ಸರ್ಕಾರ ನಿರ್ಧರಿಸಿದ್ದು, ಕರಾವಳಿ ಜಿಲ್ಲೆಗಳಿಂದ ಕುಚಲಕ್ಕಿ ಖರೀದಿಸಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಕುಚಲಕ್ಕಿ ವಿತರಿಸಲಾಗುವುದು , ಕುಚಲಕ್ಕಿ ಖರೀದಿಗೆ ವಿಶೇಷ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವ ಕೊಟ ಶ್ರೀನಿವಾಸ್ ಪೂಜಾರಿ ಹೇಳಿದರು.

3 ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಲ್ ಕುಚಲಕ್ಕಿ ಅವಶ್ಯಕತೆ ಇದೆ ಎಂದರು.ಕರಾವಳಿಗಳಲ್ಲಿ ಬಿಪಿಲ್ ಪಡಿತರ ಹೊಂದಿದವರಿಗೆ ಕುಚಲಕ್ಕಿ ವಿತರಿಸಬೇಕೆಂಬ ಬಹುದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿಯಲ್ಲಿ ನಡೆದ ಜನಸಂಕಲ್ಪಸಮಾವೆಶ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ವಾರ ಅಂತಿಮ ತೀರ್ಮಾನ ಹೇಳಲಾಗುವುದು ಎಂದು ಹೇಳೀದರು.