ಬಾಯ್ತಪ್ಪಿದ ರೋಹಿತ್ ಪದಕಿ.. ಥ್ರಿಲ್ಲಾದ ಫ್ಯಾನ್ಸ್: ಮತ್ತೆ ಡಾಲಿ- ಶಿವಣ್ಣ ಫುಲ್ ಗುದ್ದಾಮ್ ಗುದ್ದಿ
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕಂಬ್ಯಾಕ್ ಸಿನಿಮಾ 'ಉತ್ತರಕಾಂಡ' ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರದಲ್ಲಿ ಡಾಲಿ ಧನಂಜಯ ಹೀರೊ ಆಗಿ ಅಬ್ಬರಿಸುತ್ತಿದ್ದಾರೆ. ರಗಡ್ ಲುಕ್ನಲ್ಲಿ ಧನು ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್-5ರ ಎರಡನೇ ಎಪಿಸೋಡ್ನಲ್ಲೂ ನಟಿ ರಮ್ಯಾ ಸಿನಿಜರ್ನಿ, ಪೊಲಿಟಿಕಲ್ ಜರ್ನಿಯನ್ನು ಮೆಲುಕು ಹಾಕಲಾಯಿತು. ಇದೇ ವೇಳೆ ರಮ್ಯಾ ನಾಯಕಿಯಾಗಿ ಕಂಬ್ಯಾಕ್ ಮಾಡುತ್ತಿರುವ 'ಉತ್ತರಕಾಂಡ' ಸಿನಿಮಾ ಟಾಪಿಕ್ ಕೂಡ ಬಂತು. ಚಿತ್ರದ ನಿರ್ದೇಶಕರಾದ ರೋಹಿತ್ ಪದಕಿ ಕಾರ್ಯಕ್ರಮಕ್ಕೆ ಸರ್ಪ್ರೈಸ್ ಎಂಟ್ರಿ ಕೊಟ್ಟರು. ರಮ್ಯಾ ಕುರಿತು ತಂಡ ಬರೆದು ಕೊಟ್ಟ ಕವನ ಓದಿದರು. ರಮೇಶ್ ಅರವಿಂದ್ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೇಳಿದಾಗ ರೋಹಿತ್ ಬ್ರೇಕಿಂಗ್ ನ್ಯೂಸ್ ಕೊಟ್ಟೇಬಿಟ್ಟರು.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡ 'ಉತ್ತರಕಾಂಡ' ಚಿತ್ರದಲ್ಲಿ ನಟಿಸ್ತಿದ್ದಾರೆ. ಇದನ್ನು ನಿರ್ದೇಶಕ ರೋಹಿತ್ ಪದಕಿ ಕನ್ಫರ್ಮ್ ಮಾಡಿದ್ದಾರೆ. ಈ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳ ಥ್ರಿಲ್ಲಾಗಿದ್ದಾರೆ. ಆದರೆ ಸರ್ಪ್ರೈಸ್ ಇಲ್ಲದೇ ಇಷ್ಟು ಸಲೀಸಾಗಿ ರೋಹಿತ್ ಪದಕಿ ಈ ಮ್ಯಾಟ್ರು ಹೇಳಿಬಿಟ್ಟರಲ್ಲ ಎನ್ನುವ ಸಣ್ಣ ಬೇಸರವೂ ಕೆಲವರಲ್ಲಿದೆ. ಒಟ್ನಲ್ಲಿ ಧನಂಜಯ- ರಮ್ಯಾ- ರೋಹಿತ್ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ ಶಿವಣ್ಣನ ಎಂಟ್ರಿಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ 'ರತ್ನನ್ ಪ್ರಪಂಚ' ಸಿನಿಮಾ ಮಾಡಿದ್ದ ತಂಡವೇ 'ಉತ್ತರಕಾಂಡ' ಚಿತ್ರಕ್ಕೂ ಜೊತೆಯಾಗಿದೆ.
'ಟಗರು' ಹಾಗೂ 'ಭೈರಾಗಿ' ಸಿನಿಮಾಗಳಲ್ಲಿ ಶಿವಣ್ಣ ಹಾಗೂ ಧನಂಜಯ ಒಟ್ಟಿಗೆ ನಟಿಸಿದ್ದರು. ಎರಡೂ ಸಿನಿಮಾಗಳಲ್ಲಿ ಇವರಿಬ್ಬರು ಗುದ್ದಾಟ ಪ್ರೇಕ್ಷಕರಿಗೆ ಸಖತ್ ಮಜಾ ಕೊಟ್ಟಿತ್ತು. ಇದೀಗ 3ನೇ ಬಾರಿ ಜೋಡಿ ಒಟ್ಟಾಗುತ್ತಿದೆ. 'ಉತ್ತರಕಾಂಡ' ಪೋಸ್ಟರ್ನಲ್ಲಿ ನಟರಾಕ್ಷಸನ ಲುಕ್ ನೋಡಿದ ಮೇಲೆ ಎಷ್ಟು ವೈಲೆಂಟ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಇಂತಹ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಹೇಗಿರುತ್ತೋ ಎನ್ನುವ ಕುತೂಹಲ ಕೂಡ ಇದೆ.
ವಿಜಯ್ ಕಿರಗಂದೂರು ಅರ್ಪಿಸುತ್ತಿರುವ 'ಉತ್ತರಕಾಂಡ' ಚಿತ್ರವನ್ನು ಕೆಆರ್ಜಿ ಸಂಸ್ಥೆಯ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ಧಾರೆ. ನವೆಂಬರ್ 6ರಂದು ಮಧ್ಯಾಹ್ನ 3.22ಕ್ಕೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಗಿತ್ತು. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಂಪೂರ್ಣವಾಗಿ ಇದು ಉತ್ತರ ಕರ್ನಾಟಕ ಸೊಗಡಿನ ಸಿನಿಮಾ. 'ರತ್ನನ್ ಪ್ರಪಂಚ' ಚಿತ್ರದಲ್ಲೇ ರಮ್ಯಾ ನಟಿಸಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಆ ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದ್ದ ರಮ್ಯಾ ಅದೇ ತಂಡದ ಜೊತೆ ಈಗ ಕೆಲಸ ಮಾಡುತ್ತಿದ್ದಾರೆ.