ಒಡಿಶಾ ಆರೋಗ್ಯ ಸಚಿವ ʻನಬಾ ಕಿಶೋರ್ ದಾಸ್ʼ ನಿಧನರಾಗಿದ್ದು ಹೃದಯಾಘಾತದಿಂದ; ಮರಣೋತ್ತರ ಪರೀಕ್ಷೆ ವರದಿ

ಭುವನೇಶ್ವರ್: ಹತ್ಯೆಗೀಡಾದ ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗುಂಡು ಹಾರಿಸಿದ ನಂತರ ಅವರು 'ಕಾರ್ಡಿಯೋಜೆನಿಕ್ ಶಾಕ್' ನಿಂದ ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಪೊಲೀಸರು ಬುಧವಾರ ತಿಳಿಸಿದ್ದಾರೆ.
ವಜಾಗೊಂಡ ಹೆಚ್ಚುವರಿ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ರಾಜ್ಯ ಸಿಐಡಿ ಅವರ ವಿಚಾರಣೆ ನಡೆಸುತ್ತಿದೆ.
ನವದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಆರೋಪಿಯ ವಿಧಿವಿಜ್ಞಾನ ಮಾನಸಿಕ ಮೌಲ್ಯಮಾಪನ ನಡೆಸಲಾಗುವುದು ಮರಣೋತ್ತರ ಪರೀಕ್ಷೆಯ ವರದಿಯು ಗುಂಡೇಟಿನ ಗಾಯಗಳ ಪರಿಣಾಮವಾಗಿ ಕಾರ್ಡಿಯೋಜೆನಿಕ್ ಆಘಾತದಿಂದಾಗಿ ಸಾವು ಸಂಭವಿಸಿದೆ ಎಂದು ಸೂಚಿಸುತ್ತದೆ' ಎಂದು ಪೊಲೀಸರು ಹೇಳಿದ್ದಾರೆ. ಇನ್ನೂ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪ್ರಕರಣದ ತನಿಖೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಜನವರಿ 29 ರಂದು ಕಾರ್ಯಕ್ರಮವೊಂದಕ್ಕೆ ಸಚಿವ ನಬಾ ಕಿಶೋರ್ ದಾಸ್ ಹೋಗಿದ್ದಾಗ ಎಎಸ್‌ಐ ಗುಂಡು ಹಾರಿಸಿದ್ದರು. ಸಚಿವರು ನಂತರ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.