ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ: ಶಾಸಕ ಸೋಮಶೇಖರ್​​​ ರೆಡ್ಡಿ

ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ: ಶಾಸಕ ಸೋಮಶೇಖರ್​​​ ರೆಡ್ಡಿ

ಳ್ಳಾರಿ: ಹೊಸ ಪಕ್ಷ ಕಟ್ಟಿಕೊಂಡ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಚುನಾವಣೆ ಇಳಿದಿದ್ದಾರೆ. ಇದೀಗ ಅವರ ತಮ್ಮ ಅಣ್ಣನ ವಿರುದ್ಧವೇ ತಮ್ಮ ಪತ್ನಿಯನ್ನು ಸ್ಪರ್ಧಿಯಾಗಿ ಇಳಿಸಿದ್ದಾರೆ .

ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ನಾದಿನಿ-ಭಾವನ ಮಧ್ಯೆ ಸ್ಪರ್ಧೆ ಪೈಪೋಟಿ ನಡೆಸಿದ್ದಾರೆ. ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ. ಜನಾರ್ದನ ರೆಡ್ಡಿಗೆ ನನ್ನ ಹಾಗೆಯೇ ತ್ಯಾಗದ ಮನೋಭಾವ ಇಲ್ಲ. ಬಳ್ಳಾರಿಯಲ್ಲಿ ನಾನು ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸುವೆ.

ಏಕೆಂದರೆ ನಗರದ ಅಭಿವೃದ್ಧಿ ನನ್ನ ಕನಸು. ಕೆಲ ಕಾರ್ಯಕರ್ತರು ಹಣದ ಆಸೆಗೆ ಹೊಸ ಪಕ್ಷಕ್ಕೆ ಹೋಗಬಹುದು. ನಮ್ಮ ಕಾರ್ಯಕರ್ತರು ನಮ್ಮ ಜೊತೆಗೆ ಇರುತ್ತಾರೆ. ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ನಮಗೆ ನಷ್ಟವಿಲ್ಲ, ಕಾಂಗ್ರೆಸ್​​​​ಗೆ ನಷ್ಟ. ಸಹೋದರನಿಗಾಗಿ 6 ತಿಂಗಳು ಜೈಲಿನಲ್ಲಿದ್ದೆ. ಆಗ ಅರುಣಾ ಲಕ್ಷ್ಮೀ ನನ್ನ ಋಣ ತೀರಿಸಲು ಆಗಲ್ಲ ಎಂದರು.