ನಾನೂ ಮಧ್ಯಮ ವರ್ಗಕ್ಕೆ ಸೇರಿದವಳು, ಒತ್ತಡ ಅರ್ಥವಾಗುತ್ತೆ: ನಿರ್ಮಲಾ ಸೀತಾರಾಮನ್

ನಾನು ಕೂಡಾ ಮಧ್ಯಮ ವರ್ಗಕ್ಕೆ ಸೇರಿದವಳು, ನನಗೆ ಮಧ್ಯಮ ವರ್ಗದ ಜನರಲ್ಲಿ ಇರುವ ಒತ್ತಡ ಅರ್ಥವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್‌ಆರ್‌ಎಸ್‌ನ ಪಂಚಜನ್ಯ ಮ್ಯಾಗಜೀನ್‌ನ ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ವಿತ್ತ ಸಚಿವೆ ತಾನು ಮಧ್ಯಮ ವರ್ಗದವಳು ಎಂದು ಹೇಳಿಕೊಂಡಿದ್ದಾರೆ.
ಮಧ್ಯಮ ವರ್ಗದ ಮೇಲೆ ಬಿಜೆಪಿ ಸರ್ಕಾರ ಯಾವುದೇ ಹೆಚ್ಚುವರಿ ತೆರಿಗೆಯನ್ನು ವಿಧಿಸಿಲ್ಲ ಎಂದು ಕೂಡಾ ಈ ಸಂದರ್ಭದಲ್ಲಿ ಸೀತಾರಾಮನ್ ತಿಳಿಸಿದ್ದಾರೆ. ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಮಧ್ಯಮ ವರ್ಗವು ತೆರಿಗೆ ವಿನಾಯಿತಿ ಹೆಚ್ಚಳ ಮೊದಲಾದ ತೆರಿಗೆ ಸಂಬಂಧಿತ ಬೇಡಿಕೆಯನ್ನು, ನಿರೀಕ್ಷೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಚಿವೆ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.