ಗಣರಾಜ್ಯೋತ್ಸವಕ್ಕೆ ಭಯೋತ್ಪಾದನಾ ದಾಳಿಯ ಸಂಚು: ಇಬ್ಬರ ಬಂಧನ

ನವದೆಹಲಿ, ಜನವರಿ 17: ಗಣರಾಜ್ಯೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವಾಗಲೇ ದೆಹಲಿ ಪೊಲೀಸರು ಕಳೆದ ವಾರ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಇಬ್ಬರನ್ನು ಬಂಧಿಸಿದ್ದು, ಇದಲ್ಲದೆ ಇತರ ನಾಲ್ವರು ಭಯೋತ್ಪಾದಕ ಶಂಕಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ದೆಹಲಿ ಪೊಲೀಸ್ ವಿಶೇಷ ವಿಭಾಗದ ಮೂಲಗಳ ಪ್ರಕಾರ, ಭಯೋತ್ಪಾದಕ ಶಂಕಿತರು ಗಣರಾಜ್ಯೋತ್ಸವ ದಿನವನ್ನು ಗುರಿಯಾಗಿಸಿಕೊಂಡು ದಾಳಿಗಳಗಳನ್ನು ಮಾಡಲು ಉದ್ದೇಶಿದ್ದರು. ಇವರು ಪಾಕಿಸ್ತಾನದಿಂದ ಡ್ರಾಪ್ ಡೆಡ್ ವಿಧಾನದ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆದಿದ್ದರು. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಮೂಲಕ ಗಡಿಯ ಇನ್ನೊಂದು ಬದಿಯಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿಸಲಾಗಿದೆ.ದಿಲ್ಲಿ ಪೊಲೀಸರು ಇತರ 4 ಶಂಕಿತರನ್ನು ಹುಡುಕುತ್ತಿದ್ದಾರೆ. ಅವರು ಡ್ರಾಪ್ ಡೆಡ್ ವಿಧಾನದ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ. ಸಿಗ್ನಲ್ ಮೂಲಕ ಅಪ್ಲಿಕೇಶನ್‌ನಲ್ಲಿ ಪಾಕ್‌ನಲ್ಲಿರುವ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು. ಅವರು ಉತ್ತರಾಖಂಡದ ಅಜ್ಞಾತ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆದಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. .
ಜನವರಿಯಲ್ಲಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ ನಂತರ ವಿವಿಧ ರಾಜ್ಯಗಳಲ್ಲಿ ಉದ್ದೇಶಿತ ದಾಳಿಗಳನ್ನು ನಡೆಸಲು ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ದೆಹಲಿ ಪೊಲೀಸರಿಗೆ ದಾಳಿಯ ಸಂಚಿನಲ್ಲಿ 8 ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಭಾರತದಲ್ಲಿ ನಾಲ್ವರು ಶಂಕಿತರು ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.