ಚಾಮರಾಜನಗರ ʼಬಿಳಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆʼ : 'ಸೋಲಿಗ' ಎಂಬ ಹೆಸರು ನಾಮಕರಣ

ಚಾಮರಾಜನಗರ ʼಬಿಳಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆʼ : 'ಸೋಲಿಗ' ಎಂಬ ಹೆಸರು ನಾಮಕರಣ

ಚಾಮರಾಜನಗರ : ಬಿಳಿಗಿರಿರಂಗನ‌ ಬೆಟ್ಟದಲ್ಲಿ ಹೊಸ ಬಗೆಯ ಕೀಟ ಪತ್ತೆಯಾಗಿದ್ದು, ʼಸೋಲಿಗ ʼ ಎಂದು ಹೆಸರು ನಾಮಕರಣ ಮಾಡಲಾಗಿದೆ. ʻ ಸೋಲಿಗʼ ಜೀವ ವೈವಿಧ್ಯತೆಗೆ ಸಾಕ್ಷಿಯಾಗಿರುವ ಸಮುದಾಯದ ಹೆಸರಾಗಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ‌ ಬೆಟ್ಟದಲ್ಲಿ ಕಂಡುಬಂದತಹ ವಿಶೇಷ ಕೀಟವೂ ದಕ್ಷಿಣ ಭಾರತದಲ್ಲಿ ಪತ್ತೆಯಾದ ಮೊದಲ ಕೀಟ ಎಂದು ಕೀಟಶಾಶ್ತ್ರಜ್ಞರು ಮಾಹಿತಿ ನೀಡಿದ್ದಾರೆ.

ಕೀಟ ಆಕರ್ಷಕ, ವರ್ಣರಂಜಿತವಾಗಿದ್ದು ಸಂಬಂಧಿತ ಕೀಟಗಳಿಗಿಂತ ಭಿನ್ನವಾಗಿದೆ. ಹೊಸ ಪರಾವಲಂಬಿ ಕಣಜವು ಡಾರ್ವಿನ್​ನ‌ ಪರವಾಲಂಬಿ ಕಣಜಗಳ‌ ಉಪಕುಟುಂಬ ಮೆಟೊಪಿನೆಗೆ ಸೇರಿದೆ. ಈ ಉಪಕುಟುಂಬದ ಕೇವಲ ಎರಡು ತಳಿಗಳು ಮಾತ್ರ ಭಾರತದಲ್ಲಿ ಪತ್ತೆಯಾಗಿದೆ.

ಪತ್ತೆಯಾದ ಈ ಕಣಜದ ತಳಿಗೆ, ಕಾಡಿನ ಜೀವ ವೈವಿಧ್ಯತೆಗೆ ಸೋಲಿಗ ಸಮುದಾಯ ಸಾಕ್ಷಿಯಾಗಿದ್ದು ಮತ್ತು ಕಾಡಿನ ಬಗ್ಗೆ ಅವರಿಗೆ ಇರುವ ಜವಾಬ್ದಾರಿಗೆ ಉಡುಗೊರೆಯಾಗಿ ಸೋಲಿಗ ಎಂದು ಹೆಸರಿಡಲಾಗಿದೆ. ಹೊಸ ಜೀನಸ್‌ಗೆ 'ಸೋಲಿಗ' ಹಾಗೂ ಸ್ಪೀಸಸ್ ಗೆ ಎಕಾರಿನಾಟಾ ಸೋಲಿಗ ಎಂದು ಕರೆಯಲಾಗಿದೆ.

ಏಟ್ರಿಯ ಕೀಟ ಶಾಸ್ತ್ರಜ್ಞರಾದ ಡಾ.ಎ.ಪಿ.ರಂಜನ್ ಹಾಗೂ ಡಾ.ಪ್ರಿಯದರ್ಶನ್ ಧರ್ಮರಾಜನ್ ಎಂಬವರು ಹೊಸ ಬಗೆಯ ಪರವಾಲಂಬಿ ಕಣಜ ಪತ್ತೆ ಹಚ್ಚಿ, ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟಿಸಿದ್ದಾರೆ.