ಕೇರಳದಲ್ಲಿ ಹಕ್ಕಿ ಜ್ವರದ ಭೀತಿ: ಕರ್ನಾಟಕ ಗಡಿ ಭಾಗದಲ್ಲಿ ಹೈ ಅಲರ್ಟ್

ಕೇರಳದಲ್ಲಿ ಹಕ್ಕಿ ಜ್ವರದ ಭೀತಿ: ಕರ್ನಾಟಕ ಗಡಿ ಭಾಗದಲ್ಲಿ ಹೈ ಅಲರ್ಟ್

ಚಾಮರಾಜನಗರ: ಕೇರಳದಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಳವಾಗಿದೆ. ಈಗಾಗಲೇ ಜ್ವರದಿಂದ ಅನೇಕ ಪಕ್ಷಿ, ಕೋಳಿಗಳು ಸಾವನ್ನಪ್ಪಿದ್ದಾವೆ. ಹೀಗಾಗಿ ಕರ್ನಾಟಕ ಗಡಿ ಭಾಗದಲ್ಲಿ ಹೈ ಅಲರ್ಟ್ ಆಗಿದೆ.

ಈ ರೋಗ ಕರ್ನಾಟಕದಲ್ಲಿ ಹರಡಬಾರದು ಎಂದು ಪಶು ಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಕೇರಳದ ಮೂಲೆಗಳಿಂದ ಬರುವ ವಾಹನಗಳನ್ನು ಚೆಕ್‌ ಪೋಸ್ಟ್‌ ನಲ್ಲಿ ತಪಾಸಣೆ ನಡೆಸುತ್ತಿದೆ. ಅಲ್ಲದೇ ಕೋಳಿ ಸಾಗಾಣಿಕೆ ವಾಹನಗಳು, ಕೋಳಿಯ ಆಹಾರ ಪದಾರ್ಥಗಳ ಸಾಗಾಣಿಕೆ ವಾಹನಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಮುನ್ನೆಚ್ಚರಿಕೆಯಾಗಿ ಪ್ರತಿ ವಾಹನಗಳಿಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಿ ತದ ನಂತರ ಜಿಲ್ಲೆಯ ಒಳಗೆ ವಾಹನಗಳನ್ನು ಬಿಡಲಾಗುತ್ತಿದೆ. ಅಲ್ಲದೇ ಹಕ್ಕಿ ಜ್ವರ ನಮ್ಮ ಜಿಲ್ಲೆಗೆ ಹರಡದಂತೆ ತಡೆಯಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.