ಕೇಂದ್ರ ಸರ್ಕಾರ ಖಡಕ್ ನಿರ್ಧಾರ ; ಕಳಪೆ ಗುಣಮಟ್ಟದ ಔಷಧ ತಯಾರಿಸಿದ 18 ಕಂಪನಿಗಳ ಲೈಸನ್ಸ್ ರದ್ದು
ನವದೆಹಲಿ : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಕಳಪೆ ಗುಣಮಟ್ಟದ ಔಷಧಗಳನ್ನ ಉತ್ಪಾದಿಸಿದ್ದಕ್ಕಾಗಿ 18 ಔಷಧ ಕಂಪನಿಗಳು ಪರವಾನಗಿ ಕಳೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.
18 ಔಷಧ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಉತ್ಪಾದನೆಯನ್ನ ನಿಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ನಕಲಿ ಔಷಧ ಮತ್ತು ಕಳಪೆ ಗುಣಮಟ್ಟದ ಔಷಧಿಗಳನ್ನು ತಯಾರಿಸುವ ಫಾರ್ಮಾ ಕಂಪನಿಗಳ ವಿರುದ್ಧ ದಮನದ ಭಾಗವಾಗಿ ಈ ಆದೇಶಗಳು ಬಂದಿವೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) 76 ಔಷಧೀಯ ಕಂಪನಿಗಳ ಮೇಲೆ ತಪಾಸಣೆ ನಡೆಸಿತ್ತು. ಕೇಂದ್ರ ಮತ್ತು ರಾಜ್ಯ ತಂಡಗಳು ಹಠಾತ್ ತಪಾಸಣೆ ನಡೆಸಿದ್ದು, 20 ರಾಜ್ಯಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ