ಕನ್ನಡದ ಕಾಂತಾರ ಎಲ್ಲರ ಕನಸನ್ನ ನನಸು ಮಾಡಿದೆ. ಕನ್ನಡದ ಹೆಮ್ಮೆಯ ಸಿನಿಮಾ ಆಗಿ ಹೊರಹೊಮ್ಮಿದೆ. ಮನೆಯಲ್ಲಿಯೇ ಕುಳಿತು ಸಿನಿಮಾ ನೋಡ್ತಿದ್ದ ಸಿನಿಮಾ ಪ್ರೇಮಿಗಳನ್ನೂ ಈ ಚಿತ್ರ ಥಿಯೇಟರ್ಗೆ ಕರೆದುಕೊಂಡು ಬಂದಿದೆ. ಥಿಯೇಟರ್ನಲ್ಲಿ ಜನ ಬರ್ತಿದ್ದ ಆ (Rishab Shetty Next Movie) ದಿನಗಳನ್ನ ಮತ್ತೆ ತೆಗೆದುಕೊಂಡು ಬಂದ ಖ್ಯಾತಿ ಕಾಂತಾರ ಚಿತ್ರಕ್ಕೇನೆ ಸಲ್ಲುತ್ತದೆ.
ಕಾಂತಾರ ಮೋಡಿನೇ ಹಾಗಿದೆ. ಈ ಚಿತ್ರದ ಮೂಲಕ ದೇಶದ ಪ್ರಮುಖ ರಾಜ್ಯದಲ್ಲೂ ಸುತ್ತಾಡಿದ ತುಳುನಾಡಿನ ಕನ್ನಡದ ನಟ-ನಿರ್ದೇಶಕ (Rishab shetty) ರಿಷಬ್ ಶೆಟ್ಟಿ ಟಾಕ್ ಆಫ್ ದಿ ಟೌನ್ ಆಗಿ ಬಿಟ್ಟಿದ್ದಾರೆ. ಬಾಲಿವುಡ್ ಮಂದಿ ಕೂಡ ರಿಷಬ್ ಶೆಟ್ಟಿ ಕೆಲಸಕ್ಕೆ ಫಿದಾ ಆಗಿದ್ದಾರೆ.
ಇಷ್ಟೆಲ್ಲ ಖ್ಯಾತಿ ತಂದುಕೊಟ್ಟ ಕಾಂತಾರ ಸಿನಿಮಾ ನಾಯಕ ನಟ ರಿಷಬ್ ಶೆಟ್ಟಿ ಅವರ ಆ ಒಂದು ಕನಸನ್ನ ಕೂಡ ಸಾಕಾರಗೊಳಿಸಿದೆ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ .