ಕಲಾಕಾರ್ ರಿಯಾಝ್ ಅಶ್ರಫ್ ನಿಧನ

ಮಂಗಳೂರು, ಫೆ.4: ಬ್ಯಾರಿ ಸಾಂಸ್ಕೃತಿಕ ಕಲಾರಂಗದ ಸಾಧಕ ಕಲಾಕಾರ್ ರಿಯಾಝ್ ಅಶ್ರಫ್ (50) ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನರಾದರು.
ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಾಟಿಪಳ್ಳದಲ್ಲಿ 1973ರಲ್ಲಿ ಹುಟ್ಟಿ ಬೆಳೆದ ಇವರು ತನ್ನ ವೃತ್ತಿಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡ, ಬ್ಯಾರಿ, ತುಳು, ಮಲಯಾಳಂ ಹಿಂದಿ ಭಾಷೆಯಲ್ಲಿ ಹಿಡಿತವುಳ್ಳ ಇವರು ಕವಿ, ಹಾಡುಗಾರ, ಲೇಖಕ, ಚಿತ್ರಗಾರರಾಗಿದ್ದ ಇವರು ಕಾರ್ಯಕ್ರಮ ನಿರೂಪಕರಾಗಿ ಗಮನ ಸೆಳೆದಿದ್ದರು.