JNU ಕ್ಯಾಂಪಸ್ನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹಗಳ ಪತ್ತೆ: ತನಿಖೆಗೆ ಆದೇಶ
ದೆಹಲಿಯ ಜವಾಹರ್ಲಾಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ವಿಭಾಗದಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹಗಳ ಪತ್ತೆಯಾಗಿದ್ದು, ಈ ಕುರಿತು ತನಿಖೆಗೆ ರಿಜಿಸ್ಟ್ರಾರ್ ಆದೇಶಿಸಿದ್ದಾರೆ.
ಪ್ರಾಧ್ಯಾಪಕರ ಕೊಠಡಿಯ ಬಾಗಿಲುಗಳ ಮೇಲೆ ಮತ್ತು ಹಲವು ಗೋಡೆಗಳ ಮೇಲೆ “ಬ್ರಾಹ್ಮಣರೇ ಕ್ಯಾಂಪ್ ಬಿಟ್ಟು ಹೋಗಿ, ವಾಪಸ್ ಶಾಖೆಗೆ ಹೋಗಿ, ಭಾರತ ಬಿಟ್ಟು ತೊಲಗಿ” ಎಂದು ಬರೆಯಲಾಗಿದೆ. ಇದನ್ನು ಪ್ರತ್ಯೇಕತಾ ಪ್ರವೃತ್ತಿ ಎಂದು ಕರೆದಿರುವ ಆಡಳಿತ ಮಂಡಳಿಗೆ ತನಿಖೆಗೆ ಮುಂದಾಗಿದೆ.