ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಈಗಾಗಲೇ ಲಕ್ಷಾಂತರ ಕಾರ್ಡ್ ಗಳನ್ನು ಸರ್ಕಾರ ರದ್ದುಗೊಳಿಸಿದೆ. ಈ ನಡುವೆಯೂ ಹೊಸ ಬಿಪಿಎಲ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸುತ್ತಿರೋರ ಸಂಖ್ಯೆ ಏನೂ ಕಡಿಮೆ ಆಗಿಲ್ಲ.
ಆದ್ರೇ ಹೊಸ ಕಾರ್ಡ್ ಗೆ ಸಲ್ಲಿಸಿ, ಆದ್ರೇ ಕಾರ್ಡ್ ಬಂತೋ ಇಲ್ಲವೋ, ಬರುತ್ತೋ ಇಲ್ಲವೇ ಎಂಬುದನ್ನು ಮಾತ್ರ ಕೇಳ ಬೇಡಿ ಎಂಬುದಾಗಿ ಆಹಾರ ಇಲಾಖೆ ಹೇಳುತ್ತಿದೆಹೌದು.. ರಾಜ್ಯದಲ್ಲಿ
ಈವರೆ 3.11 ಲಕ್ಷ ಕುಟುಂಬಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಸಲ್ಲಿಕೆಯಾದಂತ ಕಾರ್ಡ್ ಗಳನ್ನು ಪರಿಶೀಲಿಸಿ, ಅರ್ಹರಿಗೆ ವಿತರಿಸಬೇಕಾದಂತ ಸರ್ಕಾರ ಮಾತ್ರ, ಯಾವುದೇ ಒಪ್ಪಿಗೆ ಸೂಚಿಸದ ಕಾರಣ, ವಿತರಣೆಯಾಗಿಲ್ಲ.ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಅರ್ಹ ಕುಟುಂಬಗಳು ಆಹಾರ ಧಾನ್ಯವಿಲ್ಲದೇ, ಬಿಪಿಎಲ್ ಕಾರ್ಡ್ ನಿಂದ ವಂಚಿತವಾಗಿ ದಿನದೂಡುವಂತೆ ಆಗಿದೆ. ಇದಷ್ಟೇ ಅಲ್ಲದೇ ಬಿಪಿಎಲ್ ಕಾರ್ಡ್ ಇದ್ದರೇ ಉಚಿತ ಚಿಕಿತ್ಸೆ ಸೌಲಭ್ಯ ಕೂಡ ಸಿಗದೇ, ಪರದಾಡುವಂತೆ ಆಗಿದೆ.ಅಂದಹಾಗೇ ರಾಜ್ಯದಲ್ಲಿ 1.26 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದಾವೆ. ಹೊಸ ಕಾರ್ಡ್ ಯಾಕೆ ವಿತರಣೆ ಮಾಡುತ್ತಿಲ್ಲ ಎಂಬುದಾಗಿ ಆಹಾರ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಟಿ ರೇಜು ಅವರನ್ನು ಕೇಳಿದ್ರೇ, ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟಿಲ್ಲ. ಹೀಗಾಗಿ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳೋದಕ್ಕೆ ಆಗದೇ, ಹೊಸ ಕಾರ್ಡ್ ವಿತರಣೆ ಆಗಿಲ್ಲ. ಆದ್ರೇ ಹೊಸ ಕಾರ್ಡ್ ಗಾಗಿ ಅರ್ಜಿಯನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ ಎಂದಿದ್ದಾರೆ.