ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ಖಂಡಿಸಿ ಬೆಂಬಲ ಸೂಚಿಸಿದ ಸ್ಯಾಂಡಲ್ವುಡ್ನ ಹಲವು ನಟ-ನಟಿಯರಲ್ಲಿ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಕೂಡ ಒಬ್ಬರು. ಇನ್ನು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಟ್ವೀಟ್ ಮಾಡಿದ್ದರು, ಅದು ಸಾಕಷ್ಟು ವೈರಲ್ ಆಗಿದೆ. ಅದಕ್ಕೆ ದರ್ಶನ್ ಧನ್ಯವಾದ ಹೇಳಿದ್ದೂ ಆಯಿತು. ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ಖಂಡಿಸಿ ಬೆಂಬಲ ಸೂಚಿಸಿದ ಸ್ಯಾಂಡಲ್ವುಡ್ನ ಹಲವು ನಟ-ನಟಿಯರಲ್ಲಿ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಕೂಡ ಒಬ್ಬರು. ಇನ್ನು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಟ್ವೀಟ್ ಮಾಡಿದ್ದರು, ಅದು ಸಾಕಷ್ಟು ವೈರಲ್ ಆಗಿದೆ.
ಅದಕ್ಕೆ ದರ್ಶನ್ ಧನ್ಯವಾದ ಹೇಳಿದ್ದೂ ಆಯಿತು. ಚಿತ್ರರಂಗದ ಕಲಾವಿದರು ಸೇರಿದಂತೆ ಇಬ್ಬರ ಅಭಿಮಾನಿಗಳು ಕಿಚ್ಚ-ದಚ್ಚು ಒಂದಾಗಬೇಕೆಂದು ಬಯಸುತ್ತಿದ್ದಾರೆ. ಅವರಲ್ಲಿ ಜಗ್ಗೇಶ್ ಕೂಡ ಒಬ್ಬರು. ಕಿಚ್ಚನ ಟ್ವೀಟ್ ಗೆ ಧನ್ಯವಾದ ಹೇಳಿದ ದರ್ಶನ್ ಪ್ರತಿಕ್ರಿಯೆಗೆ ಫುಲ್ ಖುಷಿ ಆಗಿರುವ ನಟ ಜಗ್ಗೇಶ್ ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆಯಿರಿ ಎಂದು ಆಶಿಸಿ ಹಾರೈಸಿದ್ದಾರೆ. ನೀವಿಬ್ಬರು ಒಂದಾದರೆ ಕೋಟಿಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ ಎಂದು ಚಿತ್ರರಂಗದ ಒಬ್ಬ ಹಿರಿಯ ಕಲಾವಿದನಾಗಿ ಹೇಳಿದ್ದಾರೆ.