ಸೂಪರ್ ಮಾರ್ಕೆಟ್​ನಲ್ಲಿ ಹಲ್ಲೆ ಮಾಡಿದ ರಾಜೇಶ್ವರಿ ಗಾಯಕ್ವಾಡ್

ಸೂಪರ್ ಮಾರ್ಕೆಟ್​ನಲ್ಲಿ ಹಲ್ಲೆ ಮಾಡಿದ ರಾಜೇಶ್ವರಿ ಗಾಯಕ್ವಾಡ್

ಭಾರತದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ಬೆಂಬಲಿಗರು ವಿಜಯಪುರದ(ಬಿಜಾಪುರ) ಉಮದಿ ಸಶೂಫರ್ ಬಜಾರಿನಲ್ಲಿ ಗಲಾಟೆ ನಡೆಸಿದ್ದಾರೆ. ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್‍ನಲ್ಲಿ, ಮಾಲೀಕ ಮಲ್ಲಿಕಾರ್ಜುನ, ಅವರ ಪುತ್ರ ಪ್ರಶಾಂತ ಹಾಗೂ ಕೆಲಸಗಾರರ ಮೇಲೆ ಬುಧವಾರ ಹಲ್ಲೆ ನಡಸಿರುವ ಆರೋಪ ವ್ಯಕ್ತವಾಗಿದೆ. ಕಾಸ್ಮೆಟಿಕ್ ಖರೀದಿಸುವ ವೇಳೆ ಮಾತಿನ ಚಕಮಕಿ ನಡೆದು, ಬಳಿಕ ಅದು ಹಲ್ಲೆ ಮಾಡುವ ಹಂತಕ್ಕೆ ಹೋಗಿದೆ.