ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೊಡೆತಟ್ಟುವುದು ಫಿಕ್ಸ್..?

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೊಡೆತಟ್ಟುವುದು ಫಿಕ್ಸ್..?

ಬೆಂಗಳೂರು,ಅ.19- ಎಲ್ಲ ರಾಜಕೀಯ ವದಂತಿಗಳಿಗೆ ತೆರೆ ಎಳೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣಾದಿಂದಲೇ ಸ್ರ್ಪಸಿದರೆ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ಇಲ್ಲಿಂದಲೇ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಶತಾಯಗತಾಯ 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ತವರು ನೆಲದಲ್ಲೇ ಹಿಮ್ಮೆಟ್ಟಿಸಬೇಕೆಂದು ರಣತಂತ್ರ ರೂಪಿಸಿರುವ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ವರುಣಾದಿಂದಲೇ ಸ್ರ್ಪಸಲು ಮನವೊಲಿಸಿದೆ.

ಈಗಾಗಲೇ ಯಡಿಯೂರಪ್ಪ ಅವರು ತಾವು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸದೆ ಪಕ್ಷವನ್ನು ಮುನ್ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಈವರೆಗೂ ಅವರು ಪ್ರತಿನಿಸುತ್ತಿದ್ದ ಶಿಕಾರಿಪುರದಿಂದ ವಿಜಯೇಂದ್ರ ಅವರನ್ನು ಉತ್ತರಾಕಾರಿ ಮಾಡುವ ಲೆಕ್ಕಾಚಾರದಲ್ಲಿ ಬಿಎಸ್‍ವೈ ಇದ್ದರು.

ಆದರೆ ವರಿಷ್ಠರ ಲೆಕ್ಕಾಚಾರವೇ ಬೇರೆಯದ್ದಾಗಿದೆ. ಶಿಕಾರಿಪುರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸುವುದು ಸುಲಭ. ವಿಜಯೇಂದ್ರ ಅವರಿಗಿರುವ ವರ್ಚಸ್ಸು ಪ್ರಭಾವವನ್ನು ಬಳಸಿಕೊಂಡು ವರುಣಾದಿಂದ ಕಣಕ್ಕಿಳಿಸಲು ರಣತಂತ್ರ ರೂಪಿಸಿದೆ.

ಕೇವಲ ವರುಣಾ ಕ್ಷೇತ್ರ ಮಾತ್ರವಲ್ಲದೆ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಿಂಗಾಯಿತ ಮತಗಳನ್ನು ಸೆಳೆಯುವುದು ಹಾಗೂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ತವರು ಜಿಲ್ಲೆಯಲ್ಲಿ ಸೋಲಿನ ರುಚಿ ತೋರಿಸಬೇಕೆಂಬುದು ಬಿಜೆಪಿ ರೂಪಿಸಿರುವ ರಣತಂತ್ರಗಳಲ್ಲೊಂದು.

ಮೂರು ದಿನಗಳ ಹಿಂದೆ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರು ಒಂದು ವೇಳೆ ವರುಣಾದಿಂದ ನಮ್ಮ ತಂದೆ ಸ್ರ್ಪಸಿದರೆ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅವರ ಗೆಲುವಿಗೆ ಸ್ರ್ಪಸುತ್ತೇನೆ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ಸಿದ್ದರಾಮಯ್ಯ ಅವರನ್ನು ವರುಣಾದಲ್ಲಿ ಕಟ್ಟಿ ಹಾಕಲು ವಿಜಯೇಂದ್ರ ಅಸ್ತ್ರ ಬಳಸಲು ಮುಂದಾಗಿದೆ. ಏಕೆಂದರೆ ವಿಜಯೇಂದ್ರ ಸ್ರ್ಪಸಿದರೆ ಸಹಜವಾಗಿ ವರುಣಾ ಹೈವೋಲ್ಟೇಜ್ ಕ್ಷೇತ್ರವಾಗುತ್ತದೆ. ಅಲ್ಲದೆ ಯಡಿಯೂರಪ್ಪಗೂ ಪುತ್ರನನ್ನು ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆ ಎದುರಾಗಲಿದೆ.

ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಬಿಎಸ್‍ವೈ ಹೆಚ್ಚು ಹೆಚ್ಚು ಪ್ರಚಾರ ನಡೆಸಿದಷ್ಟು ಪಕ್ಷಕ್ಕೆ ಆನೆ ಬಲ ಬರಲಿದೆ. ಲಿಂಗಾಯಿತ ಮತಗಳು ಸೆಳೆಯುವುದರಿಂದ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಆಲೋಚನೆಯೂ ಇದೆ.

ವರುಣಾದಲ್ಲಿ ಈಗಲೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಪ್ರಭಾವ ಸಾಕಷ್ಟಿದೆ. 2013ರಲ್ಲೇ ಅವರು ಈ ಕ್ಷೇತ್ರದಿಂದ ಸ್ರ್ಪಸಬೇಕೆಂಬ ಒತ್ತಡ ಇತ್ತು. ಒಂದು ಹಂತದಲ್ಲಿ ಟಿಕೆಟ್ ಖಾತ್ರಿಯೂ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಲವು ರಾಜಕೀಯ ಲೆಕ್ಕಾಚಾರಗಳು ಏರುಪೇರಾಗಿದ್ದರಿಂದ ಹಿಂದೆ ಸರಿಯಬೇಕಾಗಿತ್ತು.

ಒಂದು ವೇಳೆ ಸಿದ್ದರಾಮಯ್ಯ ಅವರು ಹಾಲಿ ಕ್ಷೇತ್ರ ಬಾದಾಮಿಯಿಂದಲೇ ಸ್ರ್ಪಸಿದರೆ ಶ್ರೀರಾಮುಲು ಅವರಿಂದಲೇ ಟಕ್ಕರ್ ಕೊಡಲು ಬಿಜೆಪಿ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖ ಅಭ್ಯರ್ಥಿಗಳನ್ನು ಹಾಕುವ ಲೆಕ್ಕಾಚಾರದಲ್ಲಿದೆ.

ಸಿದ್ದರಾಮಯ್ಯಗೆ ಟಫ್ ಸ್ಪರ್ಧೆ ಕೊಡುವ ಅಭ್ಯರ್ಥಿ ಹಾಕಿದರೆ ಬೇರೆ ಕ್ಷೇತ್ರಗಳಲ್ಲಿ ಲಾಭದ ಲೆಕ್ಕಚಾರ ಮಾಡಿದೆ. ಪ್ರಚಾರದ ಕಡೇ ದಿನಗಳಲ್ಲಿ ಸಿದ್ದರಾಮಯ್ಯ ಅವರು ತಾವು ಸ್ರ್ಪಸುವ ಕ್ಷೇತ್ರದಲ್ಲೇ ಹೆಚ್ಚು ಪ್ರಚಾರ ಮಾಡುವಂತಾದರೆ ಬೇರೆ ಕಡೆ ಲಾಭ ಎಂಬ ತಂತ್ರ ಬಿಜೆಪಿಯದ್ದಾಗಿದೆ.
ಈ ಹಿಂದೆ ಬಾದಾಮಿಯಲೂ ್ಲಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿ ಪರದಾಡುವಂತೆ ಮಾಡಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಅವರು ಬಾದಾಮಿಯಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ ರಾಮುಲು ವಿರುದ್ಧ ಗೆದ್ದಿದ್ದರು.

ಹಾಗಾಗಿ ಈಗಲೂ 2018ರ ಚುನಾವಣಾ ತಂತ್ರದಂತೆ ಲೆಕ್ಕ ಹಾಕಿರುವ ಬಿಜೆಪಿ ಹೈಕಮಾಂಡ್, ವರುಣಾದಲ್ಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಜಯೇಂದ್ರರನ್ನ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.