ವೋಲ್ವೊ ಬಸ್ಗಳನ್ನು ಅಂತರ್ ಜಿಲ್ಲೆಗೆ ವಿಸ್ತರಿಸಲು ಬಿಎಂಟಿಸಿ ಪ್ಲಾನ್
ಬೆಂಗಳೂರು: BMTCಯ ವೋಲ್ವೋ ಬಸ್ಗಳನ್ನು ಅಂತರ್ ಜಿಲ್ಲೆ ವಿಸ್ತರಣೆಗೆ ಬಿಎಂಟಿಸಿ ಮೆಗಾ ಪ್ಲಾನ್ ಮಾಡುತ್ತಿದೆ. ರಾಜ್ಯದ 5 ಜಿಲ್ಲೆಗಳಿಗೆ ಬಿಎಂಟಿಸಿ ವ್ಯಾಪ್ತಿ ವಿಸ್ತರಣೆಗೆ ಯೋಚನೆ ಮಾಡಿದ್ದು, ಕೋಲಾರ, ತುಮಕೂರು, ಕನಕಪುರ, ಚಿಕ್ಕಬಳ್ಳಾಪುರ, ರಾಮನಗರಕ್ಕೆ ಬಿಎಂಟಿಸಿ ಓಡಿಸಲು ಅನುಮತಿಗಾಗಿ ಬಿಎಂಟಿಸಿ ಎಂಡಿ ಸತ್ಯವತಿ ಅವರು ಕೆಎಸ್ಆರ್ಟಿಸಿ ಎಂಡಿಗೆ ಪತ್ರ ಬರೆದಿದ್ದಾರೆ. ತುಕ್ಕು ಹಿಡಿಯುತ್ತಿರುವ ವೋಲ್ವೊ ಬಸ್ಗಳ ಕಾಯಕಲ್ಪಕ್ಕೆ ಹೊರಜಿಲ್ಲೆಗೂ BMTC ಕಾರ್ಯಾಚರಣೆ ಪ್ಲಾನ್ ಇದಾಗಿದೆ.