ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನಿಗೆ ದಾಖಲೆ ಕಾಣಿಕೆ: ಎಂಟೇ ತಿಂಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹ
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಹುಂಡಿಗೆ 8 ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಕೊರೋನಾ ನಂತರದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದು, ಎಂಟು ತಿಂಗಳ ಅವಧಿಯಲ್ಲಿ 1000 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ.
2020 -21ರಲ್ಲಿ 731 ಕೋಟಿ ರೂ., 2021 -22 ರಲ್ಲಿ 933 ಕೋಟಿ ರೂ., ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 32ರಷ್ಟು ಏರಿಕೆಯಾಗಿದೆ. 2019 -20ರಲ್ಲಿ 1,150 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಈ ವರ್ಷ ನವೆಂಬರ್ ವರೆಗೆ 1033 ಕೋಟಿ ರೂ. ಸಂಗ್ರಹವಾಗಿದೆ. 2019-20ರ ದಾಖಲೆ ಹಿಂದಿಕುವ ಸಾಧ್ಯತೆ ಇದೆ.
ತಿಮ್ಮಪ್ಪನಿಗೆ ಭಕ್ತರು ಏಪ್ರಿಲ್ ನಲ್ಲಿ 127.66 ಕೋಟಿ ರೂ., ಮೇನಲ್ಲಿ 129.93 ಕೋಟಿ ರೂ., ಜೂನ್ ನಲ್ಲಿ 123.76 ಕೋಟಿ ರೂ., ಜುಲೈನಲ್ಲಿ 139.47 ಕೋಟಿ ರೂ., ಆಗಸ್ಟ್ ನಲ್ಲಿ 140.34 ಕೋಟಿ ರೂ., ಸೆಪ್ಟೆಂಬರ್ ನಲ್ಲಿ 112.18 ಕೋಟಿ ರೂ., ಅಕ್ಟೋಬರ್ ನಲ್ಲಿ 122.83 ಕೋಟಿ ರೂ., ನವೆಂಬರ್ ನಲ್ಲಿ 127.31 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ.