ಸೇನೆ ಸೇರುವ ಬಯಸುವ ಯುವಕರಿಗೆ ಗುಡ್ ನ್ಯೂಸ್ : ವಾಯುಸೇನೆಯ ಹುದ್ದೆಗಳಿಗೆ ನೇರ ನೇಮಕಾತಿ
ಉಡುಪಿ : ಭಾರತೀಯ ವಾಯುಪಡೆಯು ಭಾರತೀಯ ಮತ್ತು ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯುಪಡೆಯ ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ (ಫಾರ್ಮಸಿ) ಗುಂಪಿನಲ್ಲಿ ಏರ್ಮ್ಯಾನ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 4 ಮತ್ತು 7 ರಂದು ಚೆನ್ನೈ ಏರ್ ಫೋರ್ಸ್ ಸ್ಟೇಷನ್ ತಾಂಬರ' ನಲ್ಲಿ ನೇರ ನೇಮಕಾತಿ ರ್ಯಾಲಿಯನ್ನು ಅಯೋಜಿಸಲಾಗಿದ್ದು, ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ವೈದ್ಯಕೀಯ ಸಹಾಯಕ ಹುದ್ದೆಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು ಮತ್ತು 27 ಜೂನ್ 2002 ಮತ್ತು 27 ಜೂನ್ 2006ರ ನಡುವೆ ಜನಿಸಿದವರಾಗಿರಬೇಕು. ವೈದ್ಯಕೀಯ ಸಹಾಯಕ (ಫಾರ್ಮಸಿ) ಹುದ್ದೆಗೆ ಫಾರ್ಮಸಿಯಲ್ಲಿ ಡಿಪ್ಲೋಮಾ ಅಥವಾ ಬಿ.ಎಸ್ಸಿ ಪದವೀಧರರಾಗಿರಬೇಕು ಹಾಗೂ ಅವಿವಾಹಿತ ಅಭ್ಯರ್ಥಿಯು 27 ಜೂನ್ 1999 ಮತ್ತು 27 ಜೂನ್ 2004 ರ ನಡುವೆ ಮತ್ತು ವಿವಾಹಿತ ಅಭ್ಯರ್ಥಿಯು 27 ಜೂನ್ 1999 ಮತ್ತು 27 ಜೂನ್ 2002 ರ ನಡುವೆ ಜನಿಸಿರಬೇಕು.
ವಿದ್ಯಾರ್ಹತೆ ಮತ್ತು ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ಅಥವಾ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಉಡುಪಿ ಮೊ.ನಂ: 9945856670, 8197440155 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.