ರೋಹಿಣಿ ಸಿಂಧೂರಿ ನನ್ನ ಬಳಿ ಕ್ಷಮೆ ಕೇಳಿದ್ದಾರೆ, ಅವರ ವಿರುದ್ಧ ಇನ್ಮುಂದೆ ಸಮರ ಸಾರಲ್ಲ - ಮಾಜಿ ಸಚಿವ ಸಾರಾ ಮಹೇಶ್

ರೋಹಿಣಿ ಸಿಂಧೂರಿ ನನ್ನ ಬಳಿ ಕ್ಷಮೆ ಕೇಳಿದ್ದಾರೆ, ಅವರ ವಿರುದ್ಧ ಇನ್ಮುಂದೆ ಸಮರ ಸಾರಲ್ಲ - ಮಾಜಿ ಸಚಿವ ಸಾರಾ ಮಹೇಶ್

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ನಾನು ಅವರ ವಿರುದ್ಧ ಸಮರ ಸಾರುವುದಿಲ್ಲ ಎಂಬುದಾಗಿ ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಹಾಗೂ ಸಾರಾ ಮಹೇಶ್ ನಡುವೆ ಸಂಧಾನ ನಡೆದಿದೆ.

ಮಣಿವಣ್ಣನ್ ಅವರ ನೇತೃತ್ವದಲ್ಲಿ ಸಂಧಾನ ನಡೆದಿದೆ ಎನ್ನಲಾಗಿತ್ತು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವಂತ ಅವರು, ನಾನು ಅನುಭಿಸಿದ ನೋವು ಯಾರಿಗೂ ಬೇಡ. ರೋಹಿಣಿ ಸಿಂಧೂರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು. ನನಗೆ ಯಾರ ಮೇಲೂ ದ್ವೇಷವಿಲ್ಲ ಎಂದರು.

ನನ್ನ ಬಳಿ ಹಲವು ಅಧಿಕಾರಿಗಳು ಸಂಧಾನಕ್ಕೆ ಬಂದಿದ್ದರು. ನಮ್ಮ ವರಿಷ್ಠರಾಧಂತ ಹೆಚ್ ಡಿ ದೇವೇಗೌಡರು, ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಆಗ ನಾನು ನನ್ನ ಮೇಲೆ ಕೆಸರು ಎರಚಲು ಯತ್ನಿಸಿದ್ದನ್ನು ಕ್ಷಮಿಸಲಾರೆ ಎಂದು ಹೇಳಿದ್ದಾಗಿ ತಿಳಿಸಿದರು.

ರೋಹಿಣಿ ಸಿಂಧೂರಿ ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಪತ್ರದಲ್ಲೂ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ನಾನು ಅವರ ವಿರುದ್ಧ ಇನ್ಮುಂದೆ ಸಮರ ಸಾರೋದಿಲ್ಲ. ಬಟ್ ನನ್ನ ಕರ್ತವ್ಯ ಮಾಡಿಕೊಂಡು ಹೋಗುವೆ. ಕ್ರಮ ಜರುಗಿಸೋದು ಬಿಡೋದು ಸರ್ಕಾರದ ಕೆಲಸ ಎಂದು ಹೇಳಿದರು.