ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ದೂರು: ಎಚ್‌ಡಿಕೆ, ಎಚ್‌ಡಿಆರ್‌ ವಿರುದ್ಧ ಶ್ರೀನಿವಾಸ್‌ ಆರೋಪ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ದೂರು: ಎಚ್‌ಡಿಕೆ, ಎಚ್‌ಡಿಆರ್‌ ವಿರುದ್ಧ ಶ್ರೀನಿವಾಸ್‌ ಆರೋಪ

ಬೆಂಗಳೂರು: ಜೆಡಿಎಸ್ ನಾಯಕರೇ ಯಾರಿಂದಲೋ ಅಡ್ಡ ಮತದಾನ ಮಾಡಿಸಿ ನಮ್ಮ ವಿರುದ್ದ ದೂರಿದ್ದಾರೆ ಎಂದು ಜೆಡಿಎಸ್ಬಂಡಾಯ ಶಾಸಕ ಎಸ್.ಆರ್.ಶ್ರೀನಿವಾಸ್‌ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ನಾನು ಈವರೆಗೂ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಜೆಡಿಎಸ್‌ ಬೆಂಬಲಿತ ಕುಪೇಂದ್ರರೆಡ್ಡಿಗೆ ಮತ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ನಾಯಕರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲೇ ಗುಬ್ಬಿ ಕ್ಷೇತ್ರದಲ್ಲಿ ಸಮಾವೇಶ ಮಾಡಿ ಪರ್ಯಾಯ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ.ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿ ಕೇಳಿಬಂದಿತ್ತು. ಇದಕ್ಕೆ ಜೆಡಿಎಸ್‌ ನೀಡಿದ ದೂರಿಗೆ ಎಸ್ ಆರ್ ಶ್ರೀನಿವಾಸ್‌ ಪ್ರತಿಕ್ರಿಯೆ ನೀಡಿದ್ದಾರೆ.