ಮೈಸೂರು ಒಡೆಯರ್ ಜೊತೆ ತೆಗೆಸಿದ ಫೋಟೋ ಕಾಣೆ; ಸಿಕ್ಕಿದ್ರೆ ತಂದುಕೊಡಿ; ದೇವೇಗೌಡರ ಮನವಿ

ಮೈಸೂರು ಒಡೆಯರ್ ಜೊತೆ ತೆಗೆಸಿದ ಫೋಟೋ ಕಾಣೆ; ಸಿಕ್ಕಿದ್ರೆ ತಂದುಕೊಡಿ; ದೇವೇಗೌಡರ ಮನವಿ

ಬೆಂಗಳೂರು: ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗೆ ಹೊಳೆನರಸಿಪುರ ಪ್ರವಾಸಿ ಮಂದಿರದಲ್ಲಿ ತೆಗೆಸಿಕೊಂಡಿದ್ದ ಫೋಟೊ ಕಾಣೆಯಾಗಿದೆ. ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ. ಪ್ರಿಂಟ್ ಹಾಕಿಸಿ ವಾಪಸ್ ಕೊಡುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮನವಿ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ ಒಡೆಯರ್ ಅವರೊಂದಿಗೆ ಮುಂಜಾನೆಯ ಉಪಹಾರ ಸೇವಿಸಿದ್ದೆ. ಈ ಸಂದರ್ಭ ಅವಿಸ್ಮರಣೀಯ ಫೋಟೊ ತೆಗೆಯಲಾಗಿತ್ತು. ಆದರೆ ಮನೆ ಬದಲಿಸುವಾಗ ಫೋಟೊ ನಾಪತ್ತೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು ರಾಜ್ಯ ರಾಜಕೀಯದಲ್ಲಿ ತಕ್ಕಮಟ್ಟಿಗೆ ಅಲ್ಲಿ ರಾಜಕೀಯ ಚದುರಂಗದಾಟಗಳು ಶುರುವಾಗಿವೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್​ ತಮ್ಮ ತಮ್ಮ ಯಾತ್ರೆಗಳನ್ನು ಕೈಗೊಂಡಿವೆ. ಈ ಮಧ್ಯೆ, ಮತ್ತೊಂದು ಪ್ರಮುಖ ಪಕ್ಷವಾದ ಜಾತ್ಯತೀತ ಜನತಾ ದಳ ಪಕ್ಷವೂ 2023ರ ಚುನಾವಣೆಗೆ ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದೆ.