ಪ್ರಭಾಸ್‌ ಅಭಿನಯದ"ಆದಿಪುರುಷ್‌' ಟೀಸರ್‌ ಬಿಡುಗಡೆ

ಪ್ರಭಾಸ್‌ ಅಭಿನಯದ"ಆದಿಪುರುಷ್‌' ಟೀಸರ್‌ ಬಿಡುಗಡೆ

ಭಾಸ್‌ ಮತ್ತು ಸೈಫ್ ಅಲಿ ಖಾನ್‌ ನಟನೆಯ ಬಹುನಿರೀಕ್ಷಿತ “ಆದಿಪುರುಷ್‌’ ಸಿನೆಮಾದ ಟೀಸರ್‌ ರವಿವಾರ ಬಿಡುಗಡೆಯಾಗಿದೆ.

ಸಿನೆಮಾದಲ್ಲಿ ಭಗವಂತ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್‌, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್‌ ಮತ್ತು ಸೀತೆಯ ಪಾತ್ರದಲ್ಲಿ ಕೃತಿ ಸನಾನ್‌ ನಟಿಸಿದ್ದಾರೆ.

ರಾಮಾಯಣದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್‌ ಈ ಚಿತ್ರಕ್ಕೆ ಆಯಕ್ಷನ್‌-ಕಟ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಸರಯೂ ನದಿ ತೀರದಲ್ಲಿ ಚಿತ್ರ ತಂಡ ರವಿವಾರ ಟೀಸರ್‌ ಬಿಡುಗಡೆಗೊಳಿಸಿದೆ.