ಮೈಸೂರಿನಲ್ಲಿ ಮತ್ತೆ ಚಿರತೆ ಹಾವಳಿ: ನಾಯಿ ಹೊತ್ತೊಯ್ಧ ದೃಶ್ಯ ಸೆರೆ, ಗ್ರಾಮಸ್ಥರಲ್ಲಿ ಆತಂಕ

ಮೈಸೂರಿನಲ್ಲಿ ಮತ್ತೆ ಚಿರತೆ ಹಾವಳಿ: ನಾಯಿ ಹೊತ್ತೊಯ್ಧ ದೃಶ್ಯ ಸೆರೆ, ಗ್ರಾಮಸ್ಥರಲ್ಲಿ ಆತಂಕ

ಮಂಡ್ಯ : ಜಿಲ್ಲೆಯಲ್ಲಿ ಮತ್ತೆ ನಿಲ್ಲದ ಚಿರತೆ ಹಾವಳಿ ಹೆಚ್ಚಾಗಿದ್ದು, ಬೆಳ್ಳಂ ಬೆಳಗ್ಗೆ ಕೆ.ಬೆಳ್ಳೂರು ಗ್ರಾಮದಲ್ಲಿನ ಮನೆಯೊಂದರಲ್ಲಿದ್ದ ನಾಯಿಯೊಂದನ್ನ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಘಟನೆ ಕಂಡ ಮನೆ ಮಂದಿಯೆಲ್ಲ ಕಂಗಾಲಾಗಿದ್ದು ಮನೆಯಿಂದ ಆಚೆ ಕಾಲಿಡೋದಕ್ಕೂ ಭಯಪಡುವಂತಾಗಿದೆ. ಗ್ರಾಮಕ್ಕೆ ಚಿರತೆ ಬಂದಿರುವ ವಿಚಾರ ತಿಳಿದು ಗ್ರಾಮಸ್ಥರು ಬೆಚ್ಚಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.