ಮಾರ್ಚ್ 21 ರಿಂದ ಈಶಾನ್ಯ ರಾಜ್ಯಗಳಲ್ಲಿ ʻಭಾರತ್ ಗೌರವ್ ರೈಲುʼ ಸೇವೆ ಪ್ರಾರಂಭ

ಮಾರ್ಚ್ 21 ರಿಂದ ಈಶಾನ್ಯ ರಾಜ್ಯಗಳಲ್ಲಿ ʻಭಾರತ್ ಗೌರವ್ ರೈಲುʼ ಸೇವೆ ಪ್ರಾರಂಭ

ಗುವಾಹಟಿ: ಮಾರ್ಚ್ 21 ರಿಂದ ಈಶಾನ್ಯ ರಾಜ್ಯಗಳಲ್ಲಿ ಭಾರತ್ ಗೌರವ್ ರೈಲು (Bharat Gaurav Train) ಸೇವೆ ಪ್ರಾರಂಭವಾಗಲಿದೆ.

ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನ ಮೂಲಕ ಭಾರತದ ಈಶಾನ್ಯ ರಾಜ್ಯಗಳನ್ನು ಅನ್ವೇಷಿಸಲು ಭಾರತೀಯ ರೈಲ್ವೆ ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರವಾಸ ನಡೆಸಲಿದೆ.

ಮಾರ್ಚ್ 21 ರಂದು ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ರೈಲು ಪ್ರವಾಸ ಪ್ರಾರಂಭವಾಗಲಿದ್ದು, ಅಸ್ಸಾಂನ ಗುವಾಹಟಿ, ಶಿವಸಾಗರ್, ಫರ್ಕಟಿಂಗ್ ಮತ್ತು ಕಾಜಿರಂಗ, ತ್ರಿಪುರಾದ ಉನಕೋಟಿ, ಅಗರ್ತಲಾ ಮತ್ತು ಉದಯಪುರ, ನಾಗಾಲ್ಯಾಂಡ್‌ನ ದಿಮಾಪುರ್ ಮತ್ತು ಕೊಹಿಮಾ ಮತ್ತು ಮೇಘಾಲಯದ ಶಿಲ್ಲಾಂಗ್ ಮತ್ತು ಚಿರಾಪುಂಜಿಯನ್ನು 15 ದಿನಗಳ ಪ್ರವಾಸದಲ್ಲಿ ಪ್ರಯಾಣಿಸಲಿದೆ.

ಈ ಬಗ್ಗೆ NF ರೈಲ್ವೆಯ CPRO ಸಬ್ಯಸಾಚಿ ಡಿ ಮಾಹಿತಿ ನೀಡಿದ್ದು, 'ಭಾರತ್ ಗೌರವ್ ಡಿಲಕ್ಸ್ AC ಟೂರಿಸ್ಟ್ ರೈಲು ಸಂಖ್ಯೆ. 00412 ಮಾರ್ಚ್ 21, 2023 ರಂದು ದೆಹಲಿ ಸಫ್ದರ್‌ಜಂಗ್ ನಿಲ್ದಾಣದಿಂದ 15:20 ಗಂಟೆಗೆ ಹೊರಡಲಿದೆ' ಎಂದಿದ್ದಾರೆ.

ಪ್ರವಾಸಿಗರು ಗಾಜಿಯಾಬಾದ್, ಅಲಿಘರ್, ತುಂಡ್ಲಾ, ಇಟಾವಾ, ಕಾನ್ಪುರ್ ಮತ್ತು ಲಕ್ನೋ ನಿಲ್ದಾಣಗಳಲ್ಲಿ ಹತ್ತಬಹುದು ಮತ್ತು ಡಿ-ಬೋರ್ಡ್ ಮಾಡಬಹುದು.