ಮತ್ತೆ ರೆಪೊ ದರ ಹೆಚ್ಚಳ

ಮತ್ತೆ ರೆಪೊ ದರ ಹೆಚ್ಚಳ

ಡಿ. 7ರಂದು ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಿದೆ. ಈ ಮೂಲಕ ರೆಪೊ ದರ ಹೆಚ್ಚಳದ ವೇಗವನ್ನು ಕಡಿಮೆ ಮಾಡಿತ್ತು. ಇದರೊಂದಿಗೆ ಸತತ ಐದು ಬಾರಿ ಆರ್​ಬಿಐ ರೆಪೊ ದರ ಹೆಚ್ಚಿಸಿದಂತಾಗಿದ್ದು, ರೆಪೊ ದರ ಪ್ರಮಾಣ ಶೇಕಡಾ 6.25 ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇಕಡಾ 6.7ರಷ್ಟು ಇರಲಿದೆ ಎಂದು ಆರ್​ಬಿಐ ತಿಳಿಸಿತ್ತು. ಫೆಬ್ರವರಿಯಲ್ಲಿ ಮತ್ತೆ ಆರ್​ಬಿಐ ಹಣಕಾಸು ನೀತಿ ಸಮಿತಿ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೆಲವು ಮಂದಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.