ಅಯ್ಯೋ ಪಾಪಿ.. ಮದುವೆಯಾಗಿ ಬಂದ ಎರಡೇ ತಿಂಗಳಿಗೆ ಮಗುವನ್ನು ಕ್ರೂರವಾಗಿ ಕೊಂದ ಮಲತಾಯಿ!
ವಿಜಯಪುರ. ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಕ್ರೂರಿ ಮಲತಾಯಿ 5 ವರ್ಷ ಮಗುವನ್ನು ಅಮಾನುಷವಾಗಿ ಕೊಂದಿದ್ದಾಳೆ.
ಮತ್ತೊಬ್ಬ ಮಗ ಸಂಪತ್ ಕೊಲೆಗೂ ಯತ್ನಿಸಲಾಗಿದೆ. ಆದರೆ ಮೂರು ವರ್ಷದ ಮಗು ಸಂಪತ್ ಅದೃಷ್ಟವಶಾತ್ ಬಜಾವ್ ಆಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಈ ಇಬ್ಬರು ನತದೃಷ್ಟ ಮಕ್ಕಳು ವಿನೋದ್ ಹಾಗೂ ಶಾರುಭಾಯಿ ದಂಪತಿಯ ಪುತ್ರರು. ಆರು ತಿಂಗಳ ಹಿಂದೆ ಅನಾರೋಗ್ಯದಿಂದ ತಾಯಿ ಶಾರುಭಾಯಿ ಮೃತಪಟ್ಟರು. ಮೊದಲ ಹೆಂಡತಿ ಸಾವಿನ ಬಳಿಕ ಎರಡು ತಿಂಗಳ ಹಿಂದೆ ಸವಿತಾಳನ್ನು ವಿನೋದ್ ಎರಡನೇ ಮದುವೆಯಾಗಿದ್ದ.
ಮೊದಲನೇ ಹೆಂಡತಿಯ ಮಕ್ಕಳು ನನಗ್ಯಾಕೆ ಬೇಕು, ಮುಂದೆ ಆಸ್ತಿಯಲ್ಲಿ ಪಾಲು ಕೇಳಬಹುದು ಎಂದು ಸವಿತಾ ಕೊಲೆ ಮಾಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾಳೆ. ಹಿರಿಯ ಮಗ ಸಮೀತ್ ಕೊರಳಿಗೆ ದಾರ ಹಾಗೂ ಮೊಬೈಲ್ ಚಾರ್ಜರ್ ವೈಯರ್ ಬಳಸಿ ಕೊಲೆ ಮಾಡಿದ್ದಾಳೆ.
3 ವರ್ಷ ಸಂಪತ್ ಎದೆಗೆ ಒದ್ದಿರುವ ಕಾರಣ ಎದೆಯ ಭಾಗದ ಮೂಳೆಗಳು ಮುರಿದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಕ್ಕಳ ಮೇಲೆ ಕ್ರೂರತೆ ಮೆರೆದ ಮಹಿಳೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.