ದಾವಣಗೆರೆಯಲ್ಲಿ ಶಿಕ್ಷಕಿಯರ ಜತೆ ಅಸಭ್ಯ ವರ್ತಿಸುತ್ತಿದ್ದ ಶಿಕ್ಷಕ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ

ದಾವಣಗೆರೆ: ಜಿಲ್ಲೆಯಲ್ಲಿ ಉರ್ದು ಶಾಲೆಯ ಶಿಕ್ಷಕನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಅಜ್ಗರಾಲಿ ಖಾನ್ ಶಿಕ್ಷಕಿಯರು ಜೊತೆಗೆ ಅಸಬ್ಯ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ವೇಳೆ ಬಿಇಓಕಡೆಯಿಂದ ವರದಿ ಪಡೆದು ಶಿಕ್ಷಕನ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ತಿಪ್ಪೇಸ್ವಾಮಿ ಭರವಸೆ ನೀಡಿದ್ದಾರೆ. ಕೆಲ ಶಿಕ್ಷಕಿಯರು ಸಹ ಆರೋಪ ಮಾಡಿದ್ದು ಶಿಕ್ಷಕ ತಪ್ಪು ಮಾಡಿದ್ದಾನೆ ಎಂಬ ಅನುಮಾನ ಕಾಡುತ್ತಿದೆ.
ಇನ್ನು ಕಳೆದ 20 ವರ್ಷಗಳಿಂದ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಸೇವೆಯಲ್ಲಿ ಇರುವೆ. ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಎರಡು ದಶಕಗಳಿಂದ ಮಾಡುತ್ತಿರುವೆ.ನಾನು ಯಾರಿಗೂ ತೊಂದರೆ ನೀಡಿಲ್ಲವೆಂದು ಶಿಕ್ಷಕ ಹೇಳಿಕೊಂಡಿದ್ದಾನೆ.