ಮಂಡ್ಯ : ಕಾರಿನ ಗಾಜು ಒಡೆದು, ಬ್ಯಾಂಕಿನಿಂದ ಡ್ರಾ ಮಾಡಿದ್ದ 7 ಲಕ್ಷ ಹಣ ದರೋಡೆ

ಮಂಡ್ಯ : ಕಾರಿನ ಗಾಜು ಒಡೆದು, ಬ್ಯಾಂಕಿನಿಂದ ಡ್ರಾ ಮಾಡಿದ್ದ 7 ಲಕ್ಷ ಹಣ ದರೋಡೆ

ಮಂಡ್ಯ : ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯೋರೋರ್ವರ 7 ಲಕ್ಷ ಹಣವನ್ನು ಸಿನಿಮೀಯ ರೀತೀಯಲ್ಲಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಮಂಡ್ಯದ KR ಪೇಟೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನಿವಾಸಿ ಶಿಕ್ಷಕ ನಾಗರಾಜು ಅವರೇ ಹಣ ಕಳೆದುಕೊಂಡ ದುರ್ದೈವಿಯಾಗಿದ್ದು ಇಂದು ಪಟ್ಟಣದ ಕೆನರಾ ಬ್ಯಾಂಕ್ ನಿಂದ 7 ಲಕ್ಷ ಹಣ ಡ್ರಾ ಮಾಡಿದ್ದು, ತಮ್ಮ ಕಾರ್ ನ ಒಳಭಾಗದ ಡಿಕ್ಕಿಯಲ್ಲಿಟ್ಟು ಕೊಂಡು ಮನೆಯ ಬಳಿ ತೆರಳಿದಿದ್ದಾರೆ‌. ಮನೆಯ ಮುಂದೆ ಕಾರ್ ನಿಲ್ಲಿಸಿ ಮನೆಯ ಬಾಗಿಲು ತೆರೆದು ಬರುವಷ್ಟರಲ್ಲಿ ನಿಲ್ಲಿಸಿದ್ದ ಕಾರ್ ಡೋರ್ ನ ಗಾಜು ಒಡೆದು ಕಾರಿನಲ್ಲಿ ಹಣ ಎಗರಿಸಿದ್ದಾರೆ.

ಕಾರಿನ ಸೈರನ್ ಬಡಿದುಕೊಳ್ತಿರೋದನ್ನ ಕಂಡು ಹೋಗಿ ನೋಡುವಷ್ಟಲ್ಲಿ ಹಣ ಎಗರಿಸಿದ ದುಷ್ಕರ್ಮಿಗಳು ತಮ್ಮ ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ತಕ್ಷಣವೇ ಕಾರಿನಲ್ಲಿ ಅವರನ್ನು ಹಿಂಬಾಲಿಸಿದರಾದ್ರು ಪಟ್ಟಣದ ಹೇಮಾವತಿ ಬಡಾವಣೆಯ ಗಲ್ಲಿಯಲ್ಲಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಹಣ ಕಳೆದುಕೊಂಡ ಶಿಕ್ಷಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪಟ್ಟಣದ ಹಲವಿಲು ಕಡೆಯ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದು ಬೈಕ್ ನಲ್ಲಿ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ.