ಬೋನಿಗೆ ಬಿದ್ದ ಬೇಸರ; ಟಿ.ನರಸೀಪುರದಲ್ಲಿ ಕರುವನ್ನು ತಿನ್ನದೇ ಕೂತ ಜೋಡಿ ಚಿರತೆ!

ಬೋನಿಗೆ ಬಿದ್ದ ಬೇಸರ; ಟಿ.ನರಸೀಪುರದಲ್ಲಿ ಕರುವನ್ನು ತಿನ್ನದೇ ಕೂತ ಜೋಡಿ ಚಿರತೆ!

ಮೈಸೂರು: ತಿ. ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇವತ್ತು ಮುಂಜಾನೆ 2 ಚಿರತೆಗಳು ಬಿದ್ದಿವೆ. ಬೋನಿನಲ್ಲಿದ್ದ ಕರುವನ್ನು ತಿನ್ನಲು ಬಂದ ಜೋಡಿ ಚಿರತೆಗಳು ಸದ್ಯ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ

ತಿ.ನರಸೀಪುರ ತಾಲೂಕಿನಾದ್ಯಂತ ಈ ಎರಡು ಚಿರತೆಗಳ ಉಪಟಳದಿಂದ ಜನರು ಭಯಭೀತರಾಗಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮುಸುವಿನಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಬೋನ್​ ಅನ್ನು ಇಟ್ಟಿದ್ದರು. ಅದರೊಳಗೆ ಕರುವನ್ನು ಕಟ್ಟಿ ಹಾಕಲಾಗಿತ್ತು. ಹೀಗಾಗಿ ಆ ಕರುವನ್ನು ತಿನ್ನಲು ಬಂದ ಎರಡು ಚಿರತೆಗಳು ಸೆರೆಯಾಗಿವೆ. ಆದ್ರೆ ಕರುವನ್ನ ಚಿರತೆಗಳು ತಿಂದಿಲ್ಲ.

ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸೆರೆ ಸಿಕ್ಕಿರೋ ಚಿರೆತಗಳನ್ನ ನೋಡಲು ಸುತ್ತಾಲಿನ ಗ್ರಾಮದ ನೂರಾರು ಜನರು ಆಗಮಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ