ಬೆಂಗ್ಳೂರಲ್ಲಿ ದೊಣ್ಣೆಯಿಂದ ಹೊಡೆದು ಯುವಕ ಬರ್ಬರ ಕೊಲೆ: ರೈಲ್ವೆ ಟ್ರಾಕ್‌ ಮೇಲೆ ಮೃತದೇಹ ಪತ್ತೆ

ಬೆಂಗ್ಳೂರಲ್ಲಿ ದೊಣ್ಣೆಯಿಂದ ಹೊಡೆದು ಯುವಕ ಬರ್ಬರ ಕೊಲೆ: ರೈಲ್ವೆ ಟ್ರಾಕ್‌ ಮೇಲೆ ಮೃತದೇಹ ಪತ್ತೆ

ಬೆಂಗಳೂರು : ಸಿಲಿಕಾನ್‌ ಸಿಟಿ ನಗರದ ಪಿಳ್ಳಣ್ಣ ಗಾರ್ಡನ್​ನಲ್ಲಿ ದೊಣ್ಣೆಯಿಂದ ಹೊಡೆದು ಯುವಕನನ್ನು ಬರ್ಬರವಾಗಿ ಕೊಲೆಗೈದ ರೈಲ್ವೆ ಟ್ರಾಕ್‌ ಮೇಲೆ ಎಸೆದ ದುರಂತ ಘಟನೆ ಬೆಳಕಿಗೆ ಬಂದಿದೆ.

ಸತೀಶ್(22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ನಿನ್ನೆ ತಡ ರಾತ್ರಿ ಸತೀಶ್ ಎಂಬಾತನಿಗೆ ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದು ಬಳಿಕ ರೈಲ್ವೆ ಟ್ರ್ಯಾಕ್ ಬಳಿ ಇರುವ ಖಾಲಿ ಜಾಗದಲ್ಲಿ ಮೃತದೇಹ ಎಸೆದಿರುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಎಫ್​ಎಸ್​ಎಲ್​ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.