ಬಾಲಕಿಯೊಂದಿಗೆ ಸಬ್​ ಇನ್ಸ್​ಪೆಕ್ಟರ್​ ಪರಾರಿ: ಪೊಲೀಸರಲ್ಲಿ ದೂರು ದಾಖಲು

ಬಾಲಕಿಯೊಂದಿಗೆ ಸಬ್​ ಇನ್ಸ್​ಪೆಕ್ಟರ್​ ಪರಾರಿ: ಪೊಲೀಸರಲ್ಲಿ ದೂರು ದಾಖಲು

ಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಶಾಲಾ ಬಾಲಕಿಯೊಂದಿಗೆ ಪಲಾಯನಗೈದಿದ್ದಾರೆ. ಇದು ಈ ಪ್ರದೇಶದಲ್ಲಿ ಭಾರಿ ಆಘಾತ ಸೃಷ್ಟಿಸಿದೆ.

ಪಲಿಯಾದಲ್ಲಿ ಚೌಕಿ ಪ್ರಭಾರಿಯಾಗಿ ನೇಮಕಗೊಂಡ ಜೋಗೇಂದ್ರ ಸಿಂಗ್ ಎರಡು ದಿನಗಳ ಹಿಂದೆ ಬಾಲಕಿಯೊಂದಿಗೆ ಓಡಿಹೋಗಿರುವುದಾಗಿ ಆರೋಪಿಸಲಾಗಿದೆ.

ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ನಂತರ ವಿಷಯ ಬೆಳಕಿಗೆ ಬಂದಿದೆ.

ಮಗಳು ನಾಪತ್ತೆಯಾಗಿರುವ ಕುರಿತು ಬಾಲಕಿಯ ತಂದೆ ಲಖನೌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸ್ ಅಧಿಕಾರಿಯನ್ನು ಹೆಸರಿಸಿ ಅವರು ದೂರು ನೀಡಿದ್ದರು. ಮೂಲಗಳ ಪ್ರಕಾರ, ಸಿಂಗ್ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದನು ಮತ್ತು ಆಗಾಗ್ಗೆ ಅವಳ ಜೊತೆ ಕಾಣಿಸಿಕೊಳ್ಳುತ್ತಿದ್ದನು. ಇದರ ಬೆನ್ನತ್ತಿ ಹೋದ ಪೊಲೀಸರಿಗೆ ಅಸಲಿಯತ್ತು ತಿಳಿದಿದೆ.