ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಮನೆಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಮನೆಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದು, ಮಲಗಿದ್ದ ಸ್ಥಿತಿಯಲ್ಲಿ ಬೀಡಿ ಕಟ್ಟಿ ನರಕಯಾತನೆ ಅನುಭವಿಸುತ್ತಿರುವ ಕೊಳ್ನಾಡು ಗ್ರಾಮದ ಕಲ್ಕಾರ್ ಆಲಬೆ ನಿವಾಸಿ ಸುಶೀಲಾ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದರು.

ಅವರ ಆರೋಗ್ಯ ವಿಚಾರಿಸಿದ ಶಾಸಕರು ಸಂಪೂರ್ಣ ‌ಮಾಹಿತಿ ಪಡೆದ ಬಳಿಕ ಅವರನ್ನು ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆಗಾಗಿ ಸೂಕ್ತವಾದ ವ್ಯವಸ್ಥೆಯನ್ನು ಮಾಡಿದರು.

ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂಪೂರ್ಣ ತಪಾಸಣೆ ನಡೆಸಿದ ಬಳಿಕ ವೈದ್ಯಕೀಯ ಚಿಕಿತ್ಸೆ ನೀಡಲು ಸ್ಥಳೀಯ ಬಿಜೆಪಿ ಪ್ರಮುಖರಿಗೆ ಜವಬ್ದಾರಿ ನೀಡಿದರು.

ಜೊತೆಗೆ ಬಡಕುಟುಂಬವಾಗಿರುವ ಇವರ ಮನೆ ಆರ್ಥಿಕ ಅಡಚಣೆಯಿಂದ ಅರ್ಧದಲ್ಲಿ ನಿಂತಿರುವ ಬಗ್ಗೆ ಅನಾರೋಗ್ಯ ಪೀಡಿತೆ ಸುಶೀಲಾ ಅವರು ಶಾಸಕರ ಬಳಿ ತಿಳಿಸಿದಾಗ ಸ್ಪಂದಿಸಿದ ಅವರು ಬಾಕಿಯಾಗಿದ್ದ, ಮನೆಯ ಸಂಪೂರ್ಣ ಮಾಡಿಕೊಡುವ ಭರವಸೆ ನೀಡಿದ್ದಲ್ಲದೇ ಗುತ್ತಿಗೆದಾರನ್ನು ಕರೆದು ಕೂಡಲೇ ಮನೆಯನ್ನು ಸಂಪೂರ್ಣ ಮಾಡಿಕೊಡಿ ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಸಹಿತ ಹಣಕಾಸು ನೀಡುವುದಾಗಿ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕಳೆದ ಆರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸುಶೀಲ ಅವರು ಮಲಗಿದಲ್ಲೆಯೇ ಬೀಡಿ ಕಟ್ಟಿ ಜೀವನ ಸಾಗಿಸುವ ಹಾಗೂ ಅವರ ಕಷ್ಟಕರ ‌ಬದುಕಿನ‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ವಿಡಿಯೊ ಗಮನಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಇಂದು ಫೆ. 24 ರಂದು ಸುಶೀಲಾ ಅವರ ಮನೆಗೆ ಬೇಟಿ ನೀಡಿ ಅರೋಗ್ಯ ವಿಚಾರಿಸಿ ಸಕಲ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಿದರು. ಪ್ರಮುಖರಾದ ಪ್ರಶಾಂತ್ ಕುಮಾರ್ ಶೆಟ್ಟಿ, ಸೀತಾರಾಮ ಶೆಟ್ಟಿ, ರಾಮಪ್ರಸಾದ್ ಶೆಟ್ಟಿ ತಿರುವಾಜೆ, ಗಣೇಶ್ ರೈ ಮಾಣಿ, ಪಿ.ಡಿ.ಒ ರೋಹಿಣಿ ಬಿ. ಸ್ಥಳಕ್ಕೆ ಭೇಟಿ ನೀಡಿದರು.