ನಾನು ಯಾರ ಕಾಲು ಹಿಡಿಯೋಕು ಹೋಗಿಲ್ಲ; ಮುರುಗೇಶ ನಿರಾಣಿ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ ತಿರುಗೇಟು

ನಾನು ಯಾರ ಕಾಲು ಹಿಡಿಯೋಕು ಹೋಗಿಲ್ಲ; ಮುರುಗೇಶ ನಿರಾಣಿ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ ತಿರುಗೇಟು

ವಿಜಯಪುರ: ನಿನ್ನೆ ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಮಾತನಾಡಿದ್ದರು, ಸಚಿವೆ ಶೋಭಾ ಕರಂದ್ಲಾಜೆ ಅವರ ಕಾಲಿಗೆ ಬಿದ್ದಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಇಂದು ಶಾಸಕ ಬಸನಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.

ನಾನು ಯಾರ ಕಾಲು ಹಿಡಿಯೋಕು ಹೋಗಿಲ್ಲ. ನಾನು ವಾಜಪೇಯಿ, ಅಡ್ವಾಣಿ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಸಿದ್ಧಗಂಗಾಶ್ರೀ, ಸಿದ್ದೇಶ್ವರ ಶ್ರೀಗಳ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಆದ್ರೆ ಕೆಲವು ಸ್ವಾಮೀಜಿಗಳ ಕಾಲು ಮುಗಿಯಲ್ಲ.​ ಮುರುಘಾ ಶರಣರು ಬಂದಿದ್ದಾಗಲೂ ಕಾಲಿಗೆ ನಮಸ್ಕಾರ ಮಾಡಿಲ್ಲ. ಕೆಲ ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ತೊಂದರೆ ಆಗಿದೆ. ಶ್ರೀಗಳನ್ನು ಮನೆಗೆ ಕರೆದು ಲಕ್ಷಗಟ್ಟಲೆ ಹಣ ಕೊಡೋದು ಮಾಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.