ನನಗೂ ಸಚಿವ ಸ್ಥಾನ ನೀಡದ್ದಕ್ಕೆ ಅಸಮಾಧಾನ ಇದೆ; ಶಾಸಕ ತಿಪ್ಪಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಸಚಿವರು, ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.
ರಾಜ್ಯ ರಾಜಕಾರಣದ ಪ್ರಸ್ತುತ ಘಟನೆ, ಮಳೆ ಹಾನಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ.ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಶಾಸಕ ತಿಪ್ಪಾರೆಡ್ಡಿ ಹೇಳಿದ್ದಾರೆ. ಸಚಿವ ಸ್ಥಾನ ಕೊಡಿ ಕೊಡಿ ಅಂತ ಮೇಲೆ ಬಿದ್ದು ಕೇಳಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಎಂದು ಕೇಳಲ್ಲ. ಅಂತಹ ಸ್ವಭಾವ ನನ್ನದಲ್ಲ. ಸಿಎಂ ಈ ಹಿಂದೆ ಸಚಿವ ಮಾಡ್ತೀನಿ ಅಂತಾ ಹೇಳಿದ್ದಾರೆ. ನನಗೂ ಸಚಿವ ಸ್ಥಾನ ನೀಡದ್ದಕ್ಕೆ ಅಸಮಾಧಾನ ಇದೆ ಎಂದರು. 2-3 ಖಾತೆಗಳನ್ನು ಒಬ್ಬರೇ ಇಟ್ಟುಕೊಂಡಿದ್ದಾರೆ. ಈ ಹಿಂದೆ ನಾನು ಸಚಿವ ಸ್ಥಾನ ಕೇಳಿದ್ದು ನಿಜ. ಬೊಮ್ಮಾಯಿ ಸಂಪುಟ ರಚನೆ ವೇಳೆ ಕೇಳಿದ್ದೆ. ನನಗೆ ಕೊಡುತ್ತೇನೆ ಅಂತ ಅಶ್ವಾಸನೆ ಕೊಟ್ಟಿದ್ದು ನಿಜ. ಈಗ ಮಾಡ್ತೀವಿ ಅಂತಾರೆ ನೋಡೋಣ ಎಂದು ಹೇಳಿದ್ದಾರೆ.