ದೇವೇಗೌಡ್ರ ಜೀವನ ಚರಿತ್ರೆಯಲ್ಲಿ ಪುಟ ತಿರುವುದಂತೆಲ್ಲ ಸ್ಫೋಟಕ ಅಂಶಗಳು

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಬಹು ನಿರೀಕ್ಷಿತ ಜೀವನ ಚರಿತ್ರೆ 'ಫರೋಸ್ ಇನ್ ಎ ಫೀಲ್ಡ್'( Furrows In A Field) ಇಂದು ಅಧಿಕೃತವಾಗಿ ನವದೆಹಲಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಈ ಪುಸ್ತಕವನ್ನು ಹಿರಿಯ ವಕೀಲ ಪಾಲಿ ಎಸ್.
"ಬೇರೆ ಬೇರೆ ದೇಶದಲ್ಲಿ, ಆಯಾಯ ಭಾಷೆಗಳಲ್ಲಿ ಪ್ರಕಟಿಸುವ ರೈಟ್ಸ್ ಅನ್ನು ಪೆಂಗ್ವಿನ್ ಸಂಸ್ಥೆ ಹೊಂದಿದ್ದು, ಸದ್ಯ ಭಾರತದಲ್ಲಿ ಮಾತ್ರ ಲೋಕಾರ್ಪಣೆ ಮಾಡಲಾಗುತ್ತಿದೆ. 600 ಪುಟಗಳ ಈ ಪುಸ್ತಕದಲ್ಲಿ 23 ಅಧ್ಯಾಯಗಳಿವೆ, ಎರಡು ಭಾಗದಲ್ಲಿ ಪುಸ್ತಕವನ್ನು ಹೊರತರಲಾಗಿದೆ".
"ಮೊದಲನೇ ಭಾಗದಲ್ಲಿ ದೇವೇಗೌಡ್ರ ಕರ್ನಾಟಕದ ರಾಜಕೀಯ ಪ್ರಯಾಣದ ಬಗ್ಗೆ, ಎರಡನೇ ಭಾಗದಲ್ಲಿ ಪ್ರಧಾನಿಯಾದ ನಂತರದ ವಿದ್ಯಮಾನಗಳನ್ನು ಪುಸ್ತಕದಲ್ಲಿ ಬರೆಯಲಾಗಿದೆ. 2004ರವರೆಗಿನ ದೇವೇಗೌಡ್ರ ಪಯಣದ ವರೆಗೆ ಮಾತ್ರ ಪುಸ್ತಕದಲ್ಲಿ ಉಲ್ಲೇಖವಾಗಿದೆ"ಎಂದು ಸುಗತ ಶ್ರೀನಿವಾಸರಾಜು ಹೇಳಿದ್ದಾರೆ.
ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ: ಇದೇ ಮೊದಲ ಬಾರಿಗೆ ರಹಸ್ಯ ಹೊರಬಿಟ್ಟ ದೇವೇಗೌಡ
ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ, ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿ ಪಟ್ಟ ಕಳೆದುಕೊಂಡಿದ್ದು, ಹಣಕಾಸು ತಜ್ಞ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಪಿ.ಚಿದಂಬರಂ ಜೊತೆಗಿನ ಒಡನಾಟ ಮುಂತಾದ ವಿಚಾರದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಗೊತ್ತಿರುವ ವಿಚಾರ. ಈಗ, ಮೋದಿ ಮತ್ತು ಕುಮಾರಸ್ವಾಮಿ ನಡುವೆ ನಡೆದ ಚರ್ಚೆಯ ವಿಷಯದ ಬಗ್ಗೆ ಸುಗತ ಶ್ರೀನಿವಾಸರಾಜು ಉಲ್ಲೇಖಿಸಿದ್ದಾರೆ.
ದೇವೇಗೌಡರು, ಪ್ರಧಾನಿ ಮೋದಿಯವರ ಕಚೇರಿಯಲ್ಲಿ ಭೇಟಿ ಮಾಡಿದ್ದರು.
ಕಳೆದ ವಾರ, ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಲ್ಲಿ ಭೇಟಿ ಮಾಡಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಾಗಲಿದೆ ಎಂದು ಸುದ್ದಿಯಾಗಿತ್ತು. ಇದಾದ ನಂತರ ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರು ಹೊಂದಾಣಿಕೆಯಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. ಎರಡು ವರ್ಷಗಳ ಕೆಳಗೆ ದೊಡ್ಡ ಆಫರ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು, ಅಂದಿನ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಯವರಿಗೆ ನೀಡಿದ್ದರು ಎಂದು ಸುಗತ ಶ್ರೀನಿವಾಸರಾಜು ಹೇಳಿದ್ದಾರೆ.
ಕುಮಾರಸ್ವಾಮಿಯವರನ್ನು ಪ್ರತ್ಯೇಕವಾಗಿ ಕರೆಸಿ ಪ್ರಧಾನಿ ಮೋದಿ ಮಾತುಕತೆ.
"2019ರ ಆದಿಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿತ್ತು, ಆ ವೇಳೆ, ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರನ್ನು ಪ್ರತ್ಯೇಕವಾಗಿ ಕರೆಸಿ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಆಗ ಅಧಿಕಾರದಲ್ಲಿತ್ತು. ಬಿಜೆಪಿ ಬೆಂಬಲ ಕೊಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಐದು ವರ್ಷ ಬಿಜೆಪಿಯು ಬೆಂಬಲವನ್ನು ಹಿಂದಕ್ಕೆ ಪಡೆಯುವುದಿಲ್ಲ ಮತ್ತು ಐದೂ ವರ್ಷ ನೀವೇ ಸಿಎಂ ಎಂದು ಪ್ರಧಾನಿ ಹೇಳಿದ್ದರು"ಎಂದು ಸುಗತ ಶ್ರೀನಿವಾಸರಾಜು ಹೇಳಿದ್ದಾರೆ. ಕೆಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರುವ ಸಮಯವಾಗಿತ್ತು.
ಅದು ಕೆಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರುವ ಸಮಯವಾಗಿತ್ತು. ಆದರೆ, ಕುಮಾರಸ್ವಾಮಿಯವರು ಇದಕ್ಕೆ ಒಪ್ಪಲಿಲ್ಲ, ನನ್ನ ತಂದೆಯ ಭಾವನೆಗಳಿಗೆ ಘಾಸಿ ತರುವುದು ನನಗೆ ಬೇಕಾಗಿಲ್ಲ. ಆ ವಯಸ್ಸಿನಲ್ಲಿ ನಾನು ಅವರಿಗೆ ದುಃಖ ಕೊಡಲು ಇಷ್ಟ ಪಡುವುದಿಲ್ಲ, ಸರಕಾರ ಬಿದ್ದರೂ ಪರವಾಗಿಲ್ಲ ಎಂದು ಕುಮಾರಸ್ವಾಮಿಯವರು ಮೋದಿಯವರ ಆಫರ್ ಅನ್ನು ನಯವಾಗಿ ನಿರಾಕರಿಸಿದ್ದರು"ಎಂದು ದೇವೇಗೌಡ್ರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಗೌಡ್ರಿಗೆ ಬುಲೆಟ್ ಪ್ರೂಫ್ ಜ್ಯಾಕೆಟ್ ಹಾಕಿಕೊಳ್ಳುವಂತೆ ಮನವಿ ಮಾಡಿದ ವಿದ್ಯಮಾನ
ಮೋದಿ ಮತ್ತು ಗೌಡ್ರು ಇಬ್ಬರೂ ಚಾಣಾಕ್ಷ ರಾಜಕಾರಣಿಗಳು, ಒಬ್ಬರು ಇನ್ನೊಬ್ಬರ ಭಾವನೆಗಳಿಗೆ ಗೌರವ ಕೊಡುತ್ತಿದ್ದರು ಎಂದೂ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಗೌಡ್ರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ, ವಿಶೇಷ ಭದ್ರತಾ ದಳದ (ಎಸ್ಪಿಜಿ) ಮುಖ್ಯಸ್ಥ ಶ್ಯಾಮಲ್ ದತ್ತಾ ಅವರು ಗೌಡ್ರಿಗೆ ಬುಲೆಟ್ ಪ್ರೂಫ್ ಜ್ಯಾಕೆಟ್ ಹಾಕಿಕೊಳ್ಳುವಂತೆ ಮನವಿ ಮಾಡಿದ ವಿದ್ಯಮಾನವೂ ಪುಸ್ತಕದಲ್ಲಿ ಉಲ್ಲೇಖವಾಗಿದೆ.