ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

ಕೊಪ್ಪಳ: ಮೊದಲ ದಿನವೇ ಗಂಗಾವತಿ ಹಾಲಿ- ಮಾಜಿ ಶಾಸಕರಿಗೆ ಜನಾರ್ದನ ರೆಡ್ಡಿ ಶಾಕ್ ನೀಡಿದ್ದು, ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ನೀಡಿದ್ದಾರೆ. ದರ್ಗಾದ ಶಾದಿ ಮಹಲ್ ನಿರ್ಮಾಣಕ್ಕೆ ಧನ ಸಹಾಯ ಮಾಡುವುದಾಗಿ ರೆಡ್ಡಿ ವಾಗ್ದಾನ ನೀಡಿದ್ದಾರೆ. ದರ್ಗಾದಲ್ಲೇ ಕುಳಿತುಕೊಂಡೇ 6 ಕೋಟಿ ರೂ. ವೆಚ್ಚದ ಕಾಂಟ್ರಾಕ್ಟ್‌ಗೆ ಜನಾರ್ದನ ರೆಡ್ಡಿ ಸಹಿ ಮಾಡಿದ್ದಾರೆ. ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ನೇರವಾಗಿ ಹಣ ನೀಡುವುದಾಗಿ ರೆಡ್ಡಿ ಹೇಳಿದ್ದಾರೆ.