ತೇಲುತ್ತಿದ್ದ ನಟಿ ತಾರಾ ಕಾರು; ತಿರುಪತಿ ಪ್ರವಾಹದ ಅನುಭವ ಬಿಚ್ಚಿಟ್ಟ ನಟಿ

ತೇಲುತ್ತಿದ್ದ ನಟಿ ತಾರಾ ಕಾರು; ತಿರುಪತಿ ಪ್ರವಾಹದ ಅನುಭವ ಬಿಚ್ಚಿಟ್ಟ ನಟಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಪ್ರವಾಹ(Tirupati Flood) ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೇ ವೇಳೆ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿದ್ದ ಚಿತ್ರ ನಟಿ ತಾರಾ ಅವರು ಪ್ರವಾಹದಲ್ಲಿ ಸಿಲುಕಿ ಪವಾಡ ರೀತಿಯಲ್ಲಿ ಬೆಂಗಳೂರು (bangalore) ತಲುಪಿದ ರೀತಿಯನ್ನು ಹಂಚಿಕೊಂಡಿದ್ದಾರೆ.
ವಾಯುಭಾರ ಕುಸಿತದಿಂದ(Bay of Bengal) ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಿರುಪತಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಈ ಸಮಯದಲ್ಲಿ ತಿರುಪತಿ ದರ್ಶನ ಪಡೆಯಲು ತಾರಾ (Kannada Actress Tara) ಕುಟುಂಬದವರು ಬುಕ್‌ ಮಾಡಿದ್ದಾರೆ.

ತಿಮ್ಮಪ್ಪನ (Tirupati) ದರ್ಶನಕ್ಕಾಗಿ ತಮ್ಮ ಪರಿಚಯವಿರುವ ವ್ಯಕ್ತಿಯೊಂದಿಗೆ ಮಾಹಿತಿ ಪಡೆದು ನಿನ್ನೆ ಬೆಳಿಗ್ಗೆ ಹೊರಟೆವು, ಆದರೆ ಅಲ್ಲಿಗೆ ಹೋಗುವ ರಸ್ತೆಯುದ್ದಕ್ಕೂ ಮಳೆ ಬೀಳುತ್ತಲೆ ಇತ್ತು, ನಾವು ದಾರಿಯಲ್ಲಿ ತುಂಬಾ ಮಳೆ (rain) ಬರುತ್ತಿದೆ ಎಂದು ಪರಿಚಯಸ್ಥರನ್ನು ಕೇಳಿಕೊಂಡು ಹೋಗುತ್ತಿದ್ದೇವು, ಅವರು ಮತ್ತೆ ಧೈರ್ಯ ಕೊಟ್ಟ ಮೇಲೆ ನಾವು ಪ್ರಯಾಣ ಮುಂದುವರೆಸಿದ್ದೇವು. ಆದರೆ ಅಲ್ಲಿ ಹೋಗುತ್ತಿದ್ದಂತೆ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು.

ತಿಮ್ಮಪ್ಪ ಸನ್ನಿಧಿಗೆ ಹೋಗಲು ಬೆಟ್ಟದ ದಾರಿಯಲ್ಲಿ ಚಲಿಸಲು ಸಾಧ್ಯವೇ ಆಗುತ್ತಿರಲಿಲ್ಲ, ಸೊಂಟದವರೆಗೂ ನೀರು ಹರಿಯುತ್ತಿತ್ತು, ರಸ್ತೆಯಲ್ಲಿ ಕಾರು, ಬೈಕ್‌ (car bike) ಚಲಿಸಲು ಸಾಧ್ಯವಾಗಲಿಲ್ಲ ತುಂಬಾ ಆತಂಕವಾಯಿತು. ಕೂಡಲೇ ತಿರುಮಲಗೆ ಕರೆಮಾಡಿ ವಿಚಾರಿಸಿದಾಗ ಈಗ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ, ಅಲ್ಲೇ ಎಲ್ಲಾದರೂ ಕೆಳಗೆ ರೂಮ್‌ ಬುಕ್‌ ಮಾಡಿಕೊಂಡು ಇದ್ದುಬಿಡಿ ಎಂದು 
ನಾವು ಎಲ್ಲಿ ಹೋಗುವುದು ಅಂತ ತಿಳಿಯಲಿಲ್ಲ, ಕಾರು ತೇಲಾಡುತ್ತಿದೆ, ತಿರುಪತಿ ನಗರದ ತುಂಬಾ ನೀರು (water) ಹರಿಯುತ್ತಿದೆ. ಕೊನೆಗೆ ನಾನು ನಮ್ಮ ಚಾಲಕನಿಗೆ ಯಾವುದಾದರೂ ಸುರಕ್ಷಿತ ಜಾಗಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸುವಂತೆ ಹೇಳಿದೆ. ಆಗ ನಮಗೆ ಗೊತ್ತಿಲ್ಲದೇ ಒಂದು ಸೇಫ್‌ ಜಾಗಕ್ಕೆ ಬಂದು ನಿಂತರೆ, ಅದು ಬೆಂಗಳೂರು ಹೆದ್ದಾರಿ ಆಗಿತ್ತು. ಆಗ ನಮಗೆ ಭಗವಂತನೇ (The God) ಕರಕ್ಕೊಂಡು ಬಂತು ಬಿಟ್ಟಿದ್ದಾನೆ ಅನ್ನಿಸಿತ್ತು.

ಅಲ್ಲಿಂದು ಕೂಡಲೇ ಬೆಂಗಳೂರು ಅತ್ತ ಪ್ರಯಾಣ ಬೆಳೆಸಿದ್ದೇವೆ, ಆಗ ಕೂಡ ಬರುವ ಮಾರ್ಗದಲ್ಲೂ ರಾತ್ರಿ ಪೂರ್ತಿ ಮಳೆಯಾಗುತ್ತಿತ್ತು. ರಸ್ತೆ ಕಾಣುಸುತ್ತಿಲ್ಲ, ಕಣ್ಣ ಮುಂದೆ ಕಾರು ತೇಲಾಡಿಕೊಂಡು ಹೋಯಿತು. ನಮ್ಮ ಪತಿಯೊಬ್ಬರನ್ನು ಬಿಟ್ಟು ಎಲ್ಲಾರು ಹೋಗಿದ್ವಿ, ಮಗು ಕೂಡ ಆಳುತ್ತಿತ್ತು. ಮನೆಗೆ ಹೋಗೋಣ ಅಂತ ಹಠ ಮಾಡುಬಿಟ್ಟ, ಇಲ್ಲಂದ್ರೆ ಅಲ್ಲಿ ಇದ್ದು ಬಿಡೋಣ ಅಂತ ಇದ್ವಿ. ಟಿವಿಯಲ್ಲಿ, ಸಿನಿಮಾದಲ್ಲಿ (cinema)ಪ್ರವಾಹದ ಬಗ್ಗೆ ನೋಡಿದ್ದೆ, ಸ್ವತಃ ಅನುಭವ ಆಗಿದ್ದು ನೋಡಿ ನಮಗೆ ತುಂಬಾ ಭಯವಾಗಿತ್ತು. ಇಂದು ನಾವು ದರ್ಶನ ಮಾಡಬೇಕಿತ್ತು. ತಿಮ್ಮಪ್ಪನೇ (Thimmappa) ನಮ್ಮನ್ನು ಹುಷಾರಾಗಿ ವಾಪಸ್‌ ಕಳಿಸಿದ್ದಾನೆ ಎಂದು ಹೇಳಿಕೊಂಡರು. ಚಿತ್ತೂರು ಹತ್ತಿರ ಬರುತ್ತಿದ್ದಂತೆ ತಿರುಪತಿಯಿಂದ ಕರೆ ಬರುತ್ತೆ ಬೆಂಗಳೂರು ವಾಪಸ್ಸು ಹೋಗಿಬಿಡಿ ಅಂತ, ನಾವು ಹಳ್ಳಿ ರಸ್ತೆ, ಕತ್ತಲು ರಸ್ತೆಗಳಲ್ಲಿ ನುಗ್ಗಿ ಬರುವಾಗ ನಮ್ಮ ಹಿಂದೆ ಸಾವಿರಾರು ಕಾರುಗಳು ಹಿಂಬಾಲಿಸುತ್ತಿರುವ ಭಯಾನಕ ದೃಶ್ಯ ಕಂಡು ಆತಂಕ ಮೂಡಿತ್ತು ಎಂದು ತಾರಾ ಹೇಳಿಕೊಂಡಿದ್ದಾರೆ.


ಆಂಧ್ರದಲ್ಲಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಮೃತರ ಸಂಖ್ಯೆ 14 ಕಕ್ಕೇರಿದೆ. ಭೂ ಕುಸಿತ, ಪ್ರವಾಹ ಸೇರಿದಂತೆ ವರುಣನ ಅಬ್ಬರಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ತಲಾ ಐದು ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ. ಚಿತ್ತೂರು, ಕಡಪ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಮನೆಗಳು, (Chittoor, Kadapa and Nellore districts)ರಸ್ತೆಗಳು, ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕೆಲವೆಡೆ ರಸ್ತೆ, ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಜನರು ಮಧ್ಯದಾರಿಯಲ್ಲಿ ಸಿಲುಕಿ ಸಂಪರ್ಕ ಕಳೆದುಕೊಂಡಿದ್ದಾರೆ.

ತಿರುಮಲದಲ್ಲಿ ಭೂಕುಸಿತ:
ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲವಂತೂ ಪ್ರವಾಹ-ಭೂಕುಸಿತ (landslides) ಎರಡಕ್ಕೂ ತುತ್ತಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನೀರು ನುಗ್ಗಿದ್ದು, ಒಳಗಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ತೂರು ಜಿಲ್ಲೆಯ ಬಲಿಜೆಪಲ್ಲಿ ಹಳ್ಳದ ಪ್ರವಾಹದಲ್ಲಿ ಬಂಗಾರುಪಳ್ಳಂ ಮಂಡಲದ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದರು. ಅವರಲ್ಲಿ ಒಬ್ಬರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಇನ್ನೂ ಮೂವರು ಮಹಿಳೆಯರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅಧಿಕಾರಿಗಳನ್ನು, ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ನೋಡ ನೋಡುತ್ತಲೇ ಕಟ್ಟಡವೊಂದು ಕುಸಿದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.